ರಾಯಚೂರು: ಚುನಾವಣೆ ಬಂದಾಗ ತತ್ವ, ಸಿದ್ಧಾಂತ, ಸಂಬಂಧ ಇಲ್ಲದೆ ಕೆಲವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಹೇಳಿದ್ದಾರೆ.
ಪಕ್ಷ ಬದಲಾಯಿಸುವುದು ಅಭ್ಯರ್ಥಿಗಳ ಸ್ವತಂತ್ರವಾಗಿದ್ರೂ,ಪಕ್ಷದ ತತ್ವ, ಸಿದ್ಧಾಂತಕ್ಕೆ ವಿರೋಧವಾಗಿ ನಡೆಕೊಳ್ಳುತ್ತಿವೆ. ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಸಿಗದೆ, ಕಾಂಗ್ರೆಸ್ ಎದುರು ಸೆಣೆಸುವ ಶಕ್ತಿ ಇಲ್ಲ ಎನ್ನುವುದು ಜನತೆ ಗೊತ್ತಾಗುತ್ತಿದೆ.
ಹೈದರಾಬಾದ್- ಕರ್ನಾಟಕ ಪ್ರದೇಶವನ್ನು ಮೊದಲಿನಿಂದಲೂ ಕಾಂಗ್ರೆಸ್ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಯಾರೆ ಪಕ್ಷ ಬಿಟ್ರು ಪಕ್ಷಕ್ಕೆ ಹಾನಿಯಾಗುವುದಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ರಾಯಚೂರು ಲೋಕಸಭೆ ಹಾಲಿ ಸಂಸದರು ವಿರೋಧ ಪಕ್ಷದ ಎಲ್ಲಾ ವರ್ಗದ ಜನರೊಂದಿಗೆ ಬೇರತು, ತಮ್ಮ ವ್ಯಾಪ್ತಿಗೆ ಬರುವಂತೆ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ಯುಪಿಎ ಸರ್ಕಾರದ ಆಡಳಿತಾವಾಧಿದಲ್ಲಿ ಹೈ-ಕ ಭಾಗಕ್ಕೆ 371 ಜೆ ಜಾರಿಗೊಳಿಲಾಯಿತು. ಈ ಭಾಗದ ಜನರಿಗೆ 371ಜೆ ಪ್ರಯೋಜನ ಮತ್ತು ಅದರ ಮಹತ್ವದ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ಕಾಂಗ್ರೆಸ್ ಆಡಳಿತವಾಧಿಯಲ್ಲಿ ಅದನ್ನ ಜನರಿಗೆ ತಿಳಿಸುವಂತಹ ಕೆಲಸ ಮಾಡಿದೆ.
ಈಗಾಗಲೇ ಹೈ-ಕ ಭಾಗಕ್ಕೆ ರಾಹುಲ್ ಗಾಂಧಿಯವರು ಒಂದು ಬಾರಿ ಬಂದು ಹೋಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಅಧಿಕಾರ ಇರುವುದರಿಂದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಹೊಂದಾಣಿಕೆ ಮೆರೆಗೆ ಸೀಟು ಹಂಚಿಕೆಯಂತೆ ಮೈತ್ರಿ ಪಕ್ಷದ 28 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದು, ಹೈ-ಕ ಭಾಗದ ಐದು ಸ್ಥಾನಗಳ ಜೊತೆಗೆ ರಾಜ್ಯದಲ್ಲಿ 20 ರಿಂದ 22 ಸ್ಥಾನವನ್ನ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ರು.