ರಾಯಚೂರು: ಎಟಿಎಂ ಕಾರ್ಡ್ ಬದಲಾವಣೆ ಮಾಡಿ ಹಣ ಲಪಟಾಯಿಸುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಸಿಂಧನೂರು ಪೊಲೀಸರು ಯಶ್ವಸಿಯಾಗಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಕುಂಟಿಯ ಬಳಿ ಮನಿಗಾನಹಳ್ಳಿ ನಾರಾಯಣಸ್ವಾಮಿ ಕೃಷ್ಣಪ್ಪ ಬಂಧಿತ ಆರೋಪಿಯಾಗಿದ್ದಾನೆ. ಸಿಂಧನೂರು ನಗರ ಸೇರಿದಂತೆ ನಾನಾ ಕಡೆಗಳಲ್ಲಿ ಎಟಿಎಂ ಕಾರ್ಡ್ ಬದಲಾವಣೆ ಮಾಡಿ, ಹಣ ಡ್ರಾ ಮಾಡುತ್ತಿರುವ ದೂರು ದಾಖಲಾಗುತ್ತಿದ್ದವು. ದೂರಿನ ಆಧಾರದ ಮೇಲೆ ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗದರ್ಶನ ಮೇರೆಗೆ ಸಿಪಿಐ ಉಮೇಶ ಕಾಂಬಳೆ ಹಾಗೂ ಪಿಎಸ್‌ಐ ಸೌಮ್ಯ, ಸಿಬ್ಬಂದಿಯನ್ನ ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಈ ತಂಡದ ಕಾರ್ಯಾಚರಣೆಯಿಂದ ಆರೋಪಿ ನಾರಾಯಣಸ್ವಾಮಿ ಆರೇಸ್ಟ್ ಮಾಡಿ 40 ಸಾವಿರ ರೂಪಾಯಿ ನಗದು ಹಣ ಹಾಗೂ 20 ಎಟಿಎಂ ಕಾರ್ಡ್‌ಗಳನ್ನ ವಶಕ್ಕೆ ಪಡೆದು ಆರೋಪಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಈ ವಿಶೇಷ ತಂಡದ ಕಾರ್ಯಾಚರಣೆಯನ್ನ ಎಸ್ಪಿ ನಿಖಿಲ್. ಬಿ ಹಾಗೂ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಸುದ್ದಿ ಪ್ರಸಾರ ತಡೆಗೆ 25 ಲಕ್ಷ ರೂ ಬೇಡಿಕೆ: ಖಾಸಗಿ ಚಾನೆಲ್ ಸಿಬ್ಬಂದಿ ಬಂಧನ