ETV Bharat / state

ಮೇವು ತರಲು ಎತ್ತಿನಬಂಡಿ ಕಟ್ಟುಕೊಂಡು ಬಂದ ರೈತರನ್ನು ವಾಪಸ್ ಕಳುಹಿಸಿದ ಪೊಲೀಸರು

ಎಂದಿನಂತೆ ಇಂದು ಹೊರಟಿದ್ದ ರೈತರನ್ನು ಪೊಲೀಸರು ತಡೆದು ಹಿಂದೆ ಹೋಗುವಂತೆ ಹೇಳಿದ್ದಾರೆ. ಆದರೆ, ಮೇವು ತರಲು ಹೊರಟಿದ್ದೇವೆ ಬಿಡಿ ಎಂದು ರೈತರು ಕೇಳಿಕೊಂಡರೂ ಪೊಲೀಸರು ಕೇಳದೆ, ಲಾಕ್‌ಡೌನ್ ಇದೆ. ಬಿಡುವುದಿಲ್ಲ ಎಂದು ವಾಪಸ್ ಕಳುಹಿಸಿದರು..

police stopping
ಎತ್ತಿನ ಗಾಡಿಗಳನ್ನು ತಡೆದ ಪೊಲೀಸರು
author img

By

Published : Jul 18, 2020, 2:17 PM IST

ರಾಯಚೂರು : ಜಾನುವಾರುಗಳಿಗೆ ಮೇವು ತರಲು ಎತ್ತಿನಬಂಡಿ ಕಟ್ಟಿಕೊಂಡು ಹೋಗುತ್ತಿದ್ದ ರೈತರನ್ನು ತಡೆದು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಸಿಂಧನೂರು ನಗರದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾದ ಕಾರಣ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ತೀನ್ ಕಂದಿಲ್ ಮೂಲಕ ನಗರದ ಹೊಲದಲ್ಲಿ ದೊರೆಯುವ ಮೇವನ್ನು ತರಲು ರೈತರು ನಿತ್ಯ ಎತ್ತಿನಬಂಡಿಯಲ್ಲಿ ಹೋಗುತ್ತಾರೆ.

ರೈತ ಲಕ್ಷ್ಮಣ ಅವರ ಮಾತು

ಎಂದಿನಂತೆ ಇಂದು ಹೊರಟಿದ್ದ ರೈತರನ್ನು ಪೊಲೀಸರು ತಡೆದು ಹಿಂದೆ ಹೋಗುವಂತೆ ಹೇಳಿದ್ದಾರೆ. ಆದರೆ, ಮೇವು ತರಲು ಹೊರಟಿದ್ದೇವೆ ಬಿಡಿ ಎಂದು ರೈತರು ಕೇಳಿಕೊಂಡರೂ ಪೊಲೀಸರು ಕೇಳದೆ, ಲಾಕ್‌ಡೌನ್ ಇದೆ. ಬಿಡುವುದಿಲ್ಲ ಎಂದು ವಾಪಸ್ ಕಳುಹಿಸಿದರು. ಮೇವು ತರಲು ಅವಕಾಶ ಕಲ್ಪಿಸದ ಕಾರಣ ಬೇಸರದಲ್ಲಿಯೇ ರೈತರು ಮನೆಗೆ ಹಿಂತಿರುಗಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.