ರಾಯಚೂರು: ಮೊರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದ ಬಳಿ ಕೆಲವರು ಆಹಾರ ಪದಾರ್ಥಗಳನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಆಂಧ್ರ, ತೆಲಂಗಾಣಕ್ಕೆ ತೆರಳಿ ವಾಪಸ್ ಬಂದ ವಲಸೆ ಕಾರ್ಮಿಕರನ್ನ ಕ್ವಾರಂಟೈನ್ ಇರಿಸಲಾಗಿದೆ. ಈ ಕೇಂದ್ರದ ಬಳಿ ಯಾವುದೇ ವ್ಯಾಪಾರ-ವಹಿವಾಟು, ಜನ ಹೋಗುವುದು ನಿಷೇಧವಿದೆ. ಆದರೆ ಇದರ ನಡುವೆ ಕೆಲವರು ಕೇಂದ್ರ ಬಳಿ ತೆರಳಿ ಬ್ರೆಡ್, ಬಿಸ್ಕತ್, ಆಹಾರ ಪದಾರ್ಥಗಳನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.