ರಾಯಚೂರು: ಹೈದರಾಬಾದ್-ಕರ್ನಾಟಕ ಪ್ರದೇಶ ಆರು ಜಿಲ್ಲೆಗಳು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿದೆ. ಈ ಭಾಗದ ಶೈಕ್ಷಣಿಕ ಸುಧಾರಣೆಗಾಗಿ 2016-2017 ಸಾಲಿನ ಬಜೆಟ್ ನಲ್ಲಿ ರಾಯಚೂರು ವಿಶ್ವವಿದ್ಯಾಲಯವನ್ನು ಘೋಷಣೆ ಮಾಡಲಾಯಿತು.
ವಿಶ್ವವಿದ್ಯಾಲಯ ಸ್ಥಾಪನೆಗೆ ಕೆಲವೊಂದು ತಾಂತ್ರಿಕ ಕಾರಣದಿಂದ ವಿಳಂಬವಾದ ಪರಿಣಾಮ ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯ ನಡೆಸುವ ಭರವಸೆ ನೀಡಿತ್ತು. ಆದ್ರೆ ಇದೀಗ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅನಿಶ್ಚಿತತೆಯಿಂದ ವಿವಿ ಆರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಶೈಕ್ಷಣಿಕ ಅಭಿವೃದ್ದಿಗೆ 2016-2017ನೇ ಸಾಲಿನ ಅಂದಿನ ಸಿಎಂ ಸಿದ್ದರಾಮಯ್ಯ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ವಿಶ್ವವಿದ್ಯಾಲಯವನ್ನು ಪ್ರತ್ಯೇಕಗೊಳಿಸುವ ಬಿಸಿಲೂರು ಜಿಲ್ಲೆಯ ಜನರ ದಶಕಗಳ ಹೋರಾಟಕ್ಕೆ ಫಲ ದೊರೆಕಿತ್ತು.
ಆದ್ರೆ, ಪ್ರತ್ಯೇಕ ವಿವಿ ಘೋಷಣೆ ಮಾಡಿದ ಬಳಿಕ ಅದನ್ನು ಅಭಿವೃದ್ಧಿ ಪಡಿಸುವುದಕ್ಕೆ ವಿಶೇಷ ಅನುದಾನವನ್ನು ಕಲ್ಪಿಸಬೇಕು ಎಂದು ಒತ್ತಡ ಹೇರಲಾಗಿತ್ತು. ರಾಯಚೂರು ವಿಶ್ವವಿದ್ಯಾಲಯ ಘೋಷಣೆಯಾದ ಬಳಿಕ ಅನುದಾನ ನೀಡಿರಲಿಲ್ಲ. ಈಗ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ಅನುದಾನ ಒದಗಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು.
ಇನ್ನು ರಾಯಚೂರು, ಯಾದಗಿರಿ, ಕೊಪ್ಪಳ ಸೇರಿದಂತೆ ಹೈ - ಕ ಭಾಗದ ಗುಲ್ಬರ್ಗಾ ವಿವಿ ವ್ಯಾಪ್ತಿಗೆ ಒಳಪಡುತ್ತವೆ. 2016-2017ನೇ ಸಾಲಿನ ಆಯವ್ಯಯದಲ್ಲಿ ಯಾದಗಿರಿ-ರಾಯಚೂರು ಜಿಲ್ಲೆಗಳನ್ನು ಸೇರಿಸಿ ಪ್ರಸ್ತಾಪಿತ ರಾಯಚೂರು ವಿಶ್ವವಿದ್ಯಾಲಯ ಘೋಷಣೆ ಮಾಡಿ, ರಾಯಚೂರು ತಾಲೂಕಿನ ಯರಗೇರಾ ಸ್ನಾತಕೋತ್ತರ ಕೇಂದ್ರದಲ್ಲಿ ಲಭ್ಯವಿರುವ 250 ಎಕರೆ ಪ್ರದೇಶದಲ್ಲಿ ವಿವಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿತ್ತು.
2016-2017ನೇ ಸಾಲಿನಲ್ಲಿ ಘೋಷಣೆಯಾದ ವಿವಿಗೆ ಕೇವಲ ವಿಶೇಷಾಧಿಕಾರಿ ನೇಮಿಸಿದ್ದು, ಯಾವುದೇ ಹೇಳಿಕೊಳ್ಳುವಂತ ಕೆಲಸವಾಗಲಿ, ಕನಿಷ್ಠ ಪಕ್ಷ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ, ಪ್ರಾಧ್ಯಾಪಕರು, ಒದಗಿಸುವುದೇ ಇರುವುದು ಹೈ-ಕ ಭಾಗದ ಶೈಕ್ಷಣಿಕ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿರುವ ಆರೋಪ ಕೇಳಿ ಬಂದಿತ್ತು.