ETV Bharat / state

ರಾಯಚೂರು ನವೋದಯ ಸಿಬಿಎಸ್​ಸಿ ಶಾಲೆಯಿಂದ ಶುಲ್ಕ ವಸೂಲಿ: ಪೋಷಕರ ಪ್ರತಿಭಟನೆ - Raichur

ಲಾಕ್​ಡೌನ್ ಹಿನ್ನೆಲೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗಿಲ್ಲವಾದರೂ ಶಾಲಾ ಆಡಳಿತ ಮಂಡಳಿ ಪೂರ್ಣ ಪ್ರಮಾಣದ ಶುಲ್ಕ ಪಾವತಿಗೆ ಒತ್ತಾಯಿಸುತ್ತಿದ್ದಾರೆ ಎಂದು ಪಾಲಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.

protest
ಪ್ರತಿಭಟನೆ
author img

By

Published : Aug 24, 2020, 4:34 PM IST

ರಾಯಚೂರು: ನಗರದ ನವೋದಯ ಸೆಂಟ್ರಲ್ ಸಿಬಿಎಸ್​ಸಿ ಶಾಲೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗದಿದ್ದರೂ ಪಾಲಕರಿಂದ ಪೂರ್ಣ ಶುಲ್ಕ ಪಡೆಯುತ್ತಿದೆ ಎಂದು ಆರೋಪಿಸಿ ಪಾಲಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.

ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪೋಷಕರು

ನಗರದ ನವೋದಯ ಸೆಂಟ್ರಲ್ ಸಿಬಿಎಸ್​ಸಿ ಶಾಲಾ ಆವರಣದಲ್ಲಿ ಜಮಾಯಿದ ಪಾಲಕರು, ಲಾಕ್​ಡೌನ್ ಹಿನ್ನೆಲೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗಿಲ್ಲವಾದರೂ ಶಾಲಾ ಆಡಳಿತ ಮಂಡಳಿ ಪೂರ್ಣ ಪ್ರಮಾಣದ ಶುಲ್ಕ ಪಾವತಿಗೆ ಒತ್ತಾಯಿಸುತ್ತಿದ್ದಾರೆ. ಹತ್ತನೇ ತರಗತಿ ಮಕ್ಕಳ ಶುಲ್ಕ 40 ಸಾವಿರ ರೂ. ಪಡೆಯಲಾಗಿದ್ದು, ಅದರಲ್ಲಿ ಪ್ರಯೋಗಾಲಯ, ಕ್ರೀಡೆ, ಗ್ರಂಥಾಲಯ ಸೇರಿದಂತೆ ಪ್ರತಿಯೊಂದಕ್ಕೂ ಶುಲ್ಕ ಪಡೆಯಲಾಗಿದೆ ಎಂದು ಆರೋಪಿಸಿದರು.

ಸರ್ಕಾರ ಇನ್ನೂ ಶಾಲೆ ಆರಂಭದ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೆ, ಶಾಲಾ ಆಡಳಿತ ಮಂಡಳಿ ತಮ್ಮ ಸ್ವಇಚ್ಛೆ ಅನುಸಾರ ಶುಲ್ಕ ಪಾವತಿಗೆ ಪಾಲಕರ ಮೇಲೆ ಒತ್ತಾಯ ಹಾಕುತ್ತಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ಪಾಲಕರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.