ರಾಯಚೂರು : ಮಾ.1 ಲೋಕಸಭಾ ಚುನಾವಣೆಯ ಅಂಗವಾಗಿ ನೆರೆಯ ತೆಲಂಗಾಣ ಆಂಧ್ರಪ್ರದೇಶದ ಗಡಿ ಭಾಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು ಇಂದು ಡಿಸಿ ಶರತ್ ಬಿ. ಜಿಲ್ಲಾ ಪಂಚಾಯತ್ ಸಿಇಓ ನಳಿನ್ ಅತುಲ್, ಎಸ್.ಪಿ. ಕಿಶೋರ್ ಬಾಬು ಭೇಟಿ ನೀಡಿ ಪರಿಶೀಲಿಸಿದರು.
ಚುನಾವಣಾ ದಿನ ಸಮೀಪಿಸುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಸ್ಥಾಪಿಸಲಾದ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಇತ್ತೀಚೆಗೆ ಅಶಾಪುರದ ಬಳಿ ತಪಾಸಣೆ ನಡೆಸಿ ರೂ.3 ಲಕ್ಷ ವಶಪಡಿಸಿಕೊಂಡಿದ್ದು, ವಿವಿಧೆಡೆ ತಪಾಸಣೆ ಕೈಗೊಳ್ಳಲಾಗುತ್ತಿದೆ.