ETV Bharat / state

ರಾಯಚೂರು: ಘನಮಠೇಶ್ವರ ಜಲಾಶಯದ ಹಿನ್ನೀರಲ್ಲಿ ದೇಶ – ವಿದೇಶಿ ಪಕ್ಷಿಗಳ ಕಲರವ - Nation And Foreign Birds In Backwaters Of Ghanamatheswara Reservoir

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಘನಮಠೇಶ್ವರ (ಮಾರಲದಿನ್ನಿ) ಜಲಾಶಯಕ್ಕೆ ಸುಮಾರು 6 ಸಾವಿರಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬಂದಿವೆ.

migrated birds In  Ghanamatheswar Reservoir
ಘನಮಠೇಶ್ವರ ಜಲಾಶಯದ ಹಿನ್ನೀರಲ್ಲಿ ದೇಶ–ವಿದೇಶಿ ಪಕ್ಷಿಗಳ ಕಲರವ
author img

By

Published : Jan 25, 2022, 11:45 AM IST

ರಾಯಚೂರು: ಘನಮಠೇಶ್ವರ (ಮಾರಲದಿನ್ನಿ)ಜಲಾಶಯ ಮಂಗೋಲಿಯಾ, ಚೀನಾ, ಟಿಬೆಟ್ ಸೇರಿದಂತೆ ಇತರ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ತಾಣವಾಗಿ ಗುರುತಿಸಿಕೊಂಡಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮಾರಲದಿನ್ನಿ ಗ್ರಾಮದ ಬಳಿ ನೀರಾವರಿ ಸೌಲಭ್ಯಕ್ಕೆ ಎಂದು ಬ್ರಿಟಿಷರ ಅವಧಿಯ ನೀಲನಕ್ಷೆಯಂತೆ ನಿರ್ಮಾಣಗೊಂಡ ಜಲಾಶಯ ಇತ್ತೀಚಿನ ವರ್ಷಗಳಲ್ಲಿ ಪಕ್ಷಿಧಾಮವಾಗಿ ಪರಿವರ್ತಿತಗೊಳ್ಳುತ್ತಿದೆ. ವಿಶೇಷ ಎಂದರೆ ಈ ಜಲಾಶಯಕ್ಕೆ ಸುಮಾರು 6ಸಾವಿರಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬಂದಿವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜಲಾಶಯದ ಹಿನ್ನೀರಿನ ಮಧ್ಯ ಭಾಗದಲ್ಲಿ ವಲಸೆ ಮತ್ತು ಸ್ಥಳೀಯ ಸೇರಿದಂತೆ 20 ರಿಂದ 25 ಜಾತಿಯ ವಿವಿಧ ಬಗೆಯ ಸಾವಿರಾರು ಪಕ್ಷಿಗಳು ವಾಸಿಸುತ್ತಿವೆ. ಶೆಲ್ಡಕ್, ಬ್ಲಾಕ್ ವಿಂಗೆಡ್, ಬಾರ್ ಹೆಡೆಡ್ ಗೂಸ್, ಸಿಲ್ಟ್ ಬ್ಲಾಕ್, ಐಬಿಸ್ ಸಾಫ್ಟ್ , ಸ್ಪೊಟ್ ಬಿಲ್ಲೆಡ್, ಏಶಿಯನ್ ಓಪನ್ ಬಿಲ್ ಸ್ಟಾರ್ಟ ಜಾತಿಯ ಪಕ್ಷಿಗಳ ಕಾಣ ಸಿಗುತ್ತವೆ. ಇವುಗಳಲ್ಲಿ 'ಬಾರ್ ಹೆಡೆಡ್ ಗೂಸ್' (ಅನ್ಸರ್ ಇಂಡಿಕಸ್) ಜಾತಿ ಪಕ್ಷಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

migrated birds In  Ghanamatheswar Reservoir
ಘನಮಠೇಶ್ವರ ಜಲಾಶಯದ ಹಿನ್ನೀರಲ್ಲಿ ದೇಶ–ವಿದೇಶಿ ಪಕ್ಷಿಗಳ ಕಲರವ

ಬಾರ್ ಹೆಡೆಡ್ ಗೂಸ್: ವಿದೇಶಿ ಪಕ್ಷಿಯಾಗಿದ್ದು ಇದರ ಜೀವನ ವಿಶಿಷ್ಟತೆಯಿಂದ ಕೂಡಿದೆ. ಈ ಪಕ್ಷಿ ಮಂಗೋಲಿಯಾ, ಚೈನಾ ಮತ್ತು ಟಿಬೆಟ್​​ನಲ್ಲಿ ಕಂಡು ಬರುತ್ತದೆ. ಇವುಗಳು ಚಳಿಗಾಲದಲ್ಲಿ ಬೆಚ್ಚಗಿನ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳತ್ತ ವಲಸೆ ಬರುತ್ತವೆ. ವಿಶೇಷವಾಗಿ ರಾಜ್ಯದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬರುತ್ತವೆ.

ಬಾರ್ ಹೆಡೆಡ್ ಗೂಸ್ ಜಗತ್ತಿನಲ್ಲಿ ಅತೀ ಎತ್ತರದಲ್ಲಿ ಹಾರುವ ಪಕ್ಷಿ. ವಲಸೆ ಬರುವ ಸಮಯದಲ್ಲಿ ಹಿಮಾಲಯ ಪರ್ವತ ಶ್ರೇಣಿಯನ್ನು ಸುಮಾರು 29 ಸಾವಿರ ಅಡಿಗಳ ಎತ್ತರದಲ್ಲಿ ಹಾರಿಕೊಂಡು ವಲಸೆ ಬರುತ್ತದೆ ಎಂಬುವುದು ಪಕ್ಷಿ ತಜ್ಞರ ಅಭಿಪ್ರಾಯ.

ಈ ಪಕ್ಷಿಗಳ ತಲೆಯ ಮೇಲೆ ಕಪ್ಪು ಗೆರೆಗಳಿರುವುದರಿಂದ ಇವುಗಳನ್ನು ಬಾರ್ ಹೆಡೆಡ್ ಎಂದು ಕರೆಯಲಾಗುತ್ತದೆ. ರಾತ್ರಿ ಸಮಯದಲ್ಲಿ ಸುತ್ತಮುತ್ತಲ ಪ್ರದೇಶಗಳಿಗೆ ಸಂಚರಿಸಿ ಆಹಾರ ಸೇವಿಸಿ ಹಗಲಿನ ಸಮಯದಲ್ಲಿ ಜಲಾಶಯಕ್ಕೆ ತಿರುಗುತ್ತವೆ. ಒಂದೂವರೆಯಿಂದ ಮೂರುವರೆ ಕೆಜಿ ತೂಕವಿರುತ್ತವೆ.

ಪಕ್ಷಿ ಧಾಮವಾಗಿ ಘೋಷಿಸುವಂತೆ ಆಗ್ರಹ: ರಾಜ್ಯ ಸರ್ಕಾರ ಈ ಪ್ರದೇಶವನ್ನು ಪಕ್ಷಿ ಧಾಮವಾಗಿ ಘೋಷಣೆ ಮಾಡುವ ಜತೆಗೆ ದೇಶ, ವಿದೇಶಗಳಿಂದ ವಲಸೆ ಬರುವ ಪಕ್ಷಿಗಳ ಸಂರಕ್ಷಣೆಗೆ ಮುಂದಾಗಬೇಕು. ಶಿರಹಟ್ಟಿ ತಾಲೂಕು ಮಾಗಡಿ ಕೆರೆಯಂತೆ ಈ ಜಲಾನಯನ ಪ್ರದೇಶವನ್ನು ಸಂರಕ್ಷಿತ ಪಕ್ಷಿಧಾಮ ಎಂದು ಗುರುತಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಒತ್ತಾಯಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಚೆನ್ನಬಸವ ಕಟ್ಟಿಮನಿ ಮಾತನಾಡಿ, ಮಾರಲದಿನ್ನಿ ಜಲಾನಯನ ಪ್ರದೇಶದಲ್ಲಿ ದೇಶ ವಿದೇಶಗಳಿಂದ ಸಾವಿರಾರು ವೈವಿಧ್ಯಮಯ ತಳಿ ಪಕ್ಷಿ ಸಂಕುಲ ವಲಸೆ ಬಂದಿದ್ದು ನಿಜ. ತಾವು ಕೂಡ ಈ ಕುರಿತು ಸರ್ಕಾರಕ್ಕೆ ಪಕ್ಷಿಗಳ ಸಂರಕ್ಷಿತ ಪ್ರದೇಶ ಘೋಷಣೆಗೆ ವರದಿ ಕಳುಹಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ತಾಲೀಮು: ಸಿಎಂ ನಿವಾಸದಲ್ಲಿ ಮಹತ್ವದ ಸಭೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.