ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಮಿಂಚೇರಿ ತಾಂಡಾದಲ್ಲಿ ಸಿಡಿಲು ಬಡಿದು ಮೃತಪಟ್ಟ ಸೋಮನಾಥ ಪವಾರ ಕುಟುಂಬಕ್ಕೆ ಶಾಸಕ ಡಿ. ಎಸ್. ಹೊಲಗೇರಿ ಚೆಕ್ ವಿತರಿಸಿದರು.
ಮೃತನ ಪತ್ನಿ ಆಶಾ ಪವಾರಗೆ 5 ಲಕ್ಷ ರೂ. ಚೆಕ್ ನೀಡಿ, ಹಣವನ್ನು ಮಕ್ಕಳ ಭವಿಷ್ಯಕ್ಕೆ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಸಲಹೆ ನೀಡಿದರು.
![mla-holageri](https://etvbharatimages.akamaized.net/etvbharat/prod-images/kn-lgs-01-cheque-distribution-kac10020_24042020124252_2404f_1587712372_21.jpg)
ಕೊರೊನಾ ವೈರಸ್ ಹರಡದಂತೆ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸ್ವಾಗತಾರ್ಹ. ಸಂಷ್ಟದಲ್ಲಿರುವವರಿಗೆ ದಾನಿಗಳು ನೀಡುವ ಪಡಿತರ ಕಿಟ್ ನೀಡಲಾಗುತ್ತಿದೆ. ತಾವು ಕೂಡ ಲಿಂಗಸುಗೂರಿಗೆ ಹೆಚ್ಚುವರಿ 500 ಕಿಟ್ ನೀಡುವುದಾಗಿ ಶಾಸಕ ಹೊಲಗೇರಿ ತಿಳಿಸಿದರು.