ರಾಯಚೂರು: ತಾಲೂಕಿನ ಕಟ್ಲಟ್ಕೂರು ಗ್ರಾಮದ ಕೆರೆಯಲ್ಲಿ ವಿಷ ಹಾಕಿ ಮೀನುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
![miscreants who poisoned the lake](https://etvbharatimages.akamaized.net/etvbharat/prod-images/kn-rcr-02-arrest-script-7202440_13102020063733_1310f_1602551253_537.jpeg)
ಜಂಗ್ಲಪ್ಪ, ಕೊಂಡಪ್ಪ ಬಂಧಿತ ಆರೋಪಿಗಳು. ಕಟ್ಲಟ್ಕೂರು ಗ್ರಾಮದ 300 ಹೆಚ್ಚು ಎಕರೆ ಪ್ರದೇಶದಲ್ಲಿರುವ ಕೆರೆಯಲ್ಲಿ ಮೀನುಗಾರರು ಮೀನು ಸಾಕಾಣಿಕೆ ಮಾಡಿದ್ದರು. ಆದ್ರೆ ಕಿಡಿಗೇಡಿಗಳು ಕೆರೆಯಲ್ಲಿ ವಿಷ ಬೆರೆಸಿದ ಪರಿಣಾಮ ಅಪಾರ ಪ್ರಮಾಣದ ಮೀನುಗಳು ಮೃತಪಟ್ಟಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಜಳ್ಳಿ ಗಂಗಾಮತ ಮೀನುಗಾರರ ಸಹಕಾರ ಸಂಘದ ಕಾರ್ಯದರ್ಶಿ ನರಸಪ್ಪ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.