ರಾಯಚೂರು: ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆಯಲ್ಲಿ ಜೋಡೆತ್ತುಗಳು ಚುನಾವಣೆಗೆ ಮಾತ್ರವಾಗಿವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಜೋಡೆತ್ತುಗಳು ಪ್ರಚಾರ ನಡೆಸುತ್ತಿವೆ. ಆ ಜೋಡೆತ್ತುಗಳ ಪ್ರಚಾರ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿದೆ ಎಂದರು.
ಹಾಸನ, ಮಂಡ್ಯಯ ಜೋಡು ಎತ್ತುಗಳೇ ಬೇರೆ, ನಮ್ಮ ಭಾಗದ ಜೋಡು ಎತ್ತುಗಳು ಬೇರೆ. ಬಿಜೆಪಿಯಲ್ಲಿ ಅಭಿವೃದ್ಧಿ ಪರ ಇರುವ ಜೋಡು ಎತ್ತುಗಳು ಇವೆ. ಬೋಗಸ್ ಜೋಡು ಎತ್ತುಗಳು ಚುನಾವಣೆ ಪ್ರಚಾರಕ್ಕಾಗಿ ಇರುವ ಎತ್ತುಗಳು. ಬಿಜೆಪಿಯಲ್ಲಿ ಅಂತ ಯಾವುದೇ ಜೋಡಿ ಎತ್ತುಗಳು ಇಲ್ಲ. ರೈತರಿಗೆ ಬೇಕಾದ ಬಡವರಿಗೆ ಸಹಾಯ ಮಾಡುವ ಎತ್ತುಗಳು ಬಿಜೆಪಿಯಲ್ಲಿವೆ ಎಂದರು.