ರಾಯಚೂರು : ಸರ್ಕಾರಿ ಜಮೀನಿನಲ್ಲಿ ಪ್ಲಾಟ್ ತೆಗದುಕೊಳ್ಳುವ ಮನುಷ್ಯ ತಾನಲ್ಲ ಎಂದು ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ನಗರದ 23ನೇ ವಾರ್ಡ್‌ನ ಅಲೆಮಾರಿ ಸಮುದಾಯದ ಜನರಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲ ಪಕ್ಷದ ಮುಖಂಡರು ನಾನು ಬಡವರನ್ನ ಒಕ್ಕೊಲ್ಲೆಬಿಸುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುತ್ತಾರೆ.
ಆದ್ರೆ, ನಾನು ಹಕ್ಕು ಪತ್ರ ಸಮೇತವಾಗಿ ಭೂಮಿ ಪೂಜೆ ನೇರವೇರಿಸಿ ಬಡವರಿಗೆ ಮನೆಗಳನ್ನ ನಿರ್ಮಾಣ ಮಾಡಿಕೊಡುವ ಮೂಲಕ ಟೀಕಿಸುವವರಿಗೆ ಉತ್ತರ ನೀಡುತ್ತಿದ್ದೇನೆ.
ಸರ್ಕಾರದ ಯೋಜನೆಗಳು ಬಡವರಿಗೆ ಉಚಿತವಾಗಿ ಮುಟ್ಟಬೇಕು. ಅ ನಿಟ್ಟಿನಲ್ಲಿ ಅರ್ಹ 93 ಅಲೆಮಾರಿ ಸಮುದಾಯವರಿಗೆ ಹಕ್ಕು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ನಾನು ಹಣ ತೆಗೆದುಕೊಂಡು ಸರ್ಕಾರದ ಯೋಜನೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ. ಹಾಗೇನಾದರು ನಾನು ಮಾಡಿದ್ರೆ, ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸ್ಪಷ್ಟಪಡಿಸಿದರು.
ಅಲೆಮಾರಿ ಸಮುದಾಯದಲ್ಲಿ ಬಡ ಜನರಿದ್ದಾರೆ. ಅವರಿಗೆ ಹಕ್ಕು ಪತ್ರ ನೀಡುವ ಮೂಲಕ ಮನೆಗಳ ನಿರ್ಮಾಣ ಮಾಡಿಕೊಡುವ ಜವಾಬ್ದಾರಿ ನನ್ನದು ಎಂದರು. ಈ ವೇಳೆ ಆರ್ಡಿಎ ಅಧ್ಯಕ್ಷ ಗೋಪಿ ಶೆಟ್ಟಿ, ನಗರಸಭೆ ಸದಸ್ಯ ಶಶಿರಾಜ್ ಇನ್ನಿತರರಿದ್ದರು.