ETV Bharat / state

ರಾಯಚೂರು: 2ನೇ ಹಂತದ ಗ್ರಾಪಂ ಚುನಾವಣೆಗೆ 736 ಮತಗಟ್ಟೆಗಳ ಸ್ಥಾಪನೆ - 736 ಮತಗಟ್ಟೆಗಳ ಸ್ಥಾಪನೆ

ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ, ಲಿಂಗಸೂಗೂರು ತಾಲೂಕುಗಳ 80 ಗ್ರಾಮ ಪಂಚಾಯಿತಿಗಳ 1,561 ಸ್ಥಾನಗಳ ಪೈಕಿ 1,269 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 215 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ, 77 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೆ ಹಾಗೇ ಉಳಿದಿವೆ.

ರಾಯಚೂರು
ರಾಯಚೂರು
author img

By

Published : Dec 26, 2020, 4:50 PM IST

ರಾಯಚೂರು: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಇದಕ್ಕಾಗಿ 736 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಸಿಂಧನೂರು, ಮಸ್ಕಿ, ಲಿಂಗಸೂಗೂರು ತಾಲೂಕುಗಳ 80 ಗ್ರಾಮ ಪಂಚಾಯಿತಿಗಳ 1,561 ಸ್ಥಾನಗಳ ಪೈಕಿ 1,269 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 215 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ, 77 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೆ ಹಾಗೇ ಉಳಿದಿವೆ.

ನಾಳೆ ನಡೆಯುವ ಚುನಾವಣೆಗಾಗಿ 736 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 3,160 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4,97,863 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

2ನೇ ಹಂತದ ಗ್ರಾಪಂ ಚುನಾವಣೆಗೆ 736 ಮತಗಟ್ಟೆಗಳ ಸ್ಥಾಪನೆ

ಲಿಂಗಸೂಗೂರು ತಾಲೂಕಿನ 29 ಗ್ರಾಪಂಗಳ 531 ಸ್ಥಾನಗಳಿಗೆ 75 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 456 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ 1,116 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ.. 2ನೇ ಹಂತದ ಗ್ರಾಪಂ ಚುನಾವಣೆ : ಮಸ್ಟರಿಂಗ್ ಆವರಣದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ

ಸಿಂಧನೂರು ತಾಲೂಕಿನ 30 ಗ್ರಾಪಂಗಳ 626 ಸ್ಥಾನಗಳಿಗೆ 89 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಇನ್ನುಳಿದ 537 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,378 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಮಸ್ಕಿ ತಾಲೂಕಿನ 21 ಗ್ರಾಪಂಗಳ 404 ಸ್ಥಾನಗಳಿಗೆ 51 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ, 77 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಇನ್ನುಳಿದ 276 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 666 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

113 ಸೂಕ್ಷ್ಮ, 526 ಸಾಮಾನ್ಯ ಮತಗಟ್ಟೆಗಳು

ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಸ್​ಪಿ ನಿಕ್ಕಂ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 113 ಸೂಕ್ಷ್ಮ, 526 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುವುದಕ್ಕಾಗಿ 52 ಪೊಲೀಸ್ ಅಧಿಕಾರಿ, 981 ಪೊಲೀಸ್ ಸಿಬ್ಬಂದಿ ಹಾಗೂ 84 ಗೃಹ ರಕ್ಷಕ ಸಿಬ್ಬಂದಿಗಳನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು 37 ಮೊಬೈಲ್ ಸೆಕ್ಟರ್, 13 ಸೂಪರ್ ವೈಸರ್ ಮೊಬೈಲ್ ಸೆಕ್ಟರ್ ಅಧಿಕಾರಿಗಳು, 4 ಕೆಎಸ್ಆರ್​ಪಿ, 9 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು, ಜಿಲ್ಲೆಯ ಒಳ ಬರುವ, ಹೊರ ಹೊಗುವ ವಾಹನಗಳ ತಪಾಸಣೆಗಾಗಿ 8 ಚೆಕ್ ಪೋಸ್ಟ್ ಸ್ಥಾಪಿಸಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.