ETV Bharat / state

ರಾಯಚೂರಿನಲ್ಲಿ ಸಾಮೂಹಿಕವಾಗಿ ದಸರಾ ಸಂಭ್ರಮ: ಸುಭುದೇಂದ್ರ ತೀರ್ಥರಿಂದ ಪೂಜೆ

ದಸರಾ ಹಬ್ಬದ ಅಂಗವಾಗಿ ಶ್ರೀ ಮಂತ್ರಾಲಯ ಮಠದಲ್ಲಿ ಇಂದು ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನೂ ನಗರದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆಯ ಬಳಿ ಎಲ್ಲರೂ ಆಗಮಿಸಿ ದೇವಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.

ರಾಯಚೂರಿನಲ್ಲಿ ಸಾಮೂಹಿಕವಾಗಿ ದಸರಾ ಹಬ್ಬ ಆಚರಣೆ
author img

By

Published : Oct 9, 2019, 9:50 AM IST

ರಾಯಚೂರು: ದಸರಾ ಹಬ್ಬದ ಅಂಗವಾಗಿ ಶ್ರೀ ಮಂತ್ರಾಲಯ ಮಠದಲ್ಲಿ ಇಂದು ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಶ್ರೀ ರಾಯರು ಸ್ಥಾಪಿಸಿದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ​​ಶ್ರೀಮಠದ ಸುಭುದೇಂದ್ರ ತೀರ್ಥ ಪಾದಂಗಳರು ಭೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಧಿ ವಿಧಾನ ನೆರವೇರಿಸಿದರು. ಬಳಿಕ ಶ್ರೀ ಮಠದಲ್ಲಿ ಶಮಿ ವೃಕ್ಷಕ್ಕೆ ಪೂಜೆ ನೆರವೇರಿಸಲಾಯಿತು.

ರಾಯಚೂರಿನಲ್ಲಿ ಸಾಮೂಹಿಕವಾಗಿ ದಸರಾ ಹಬ್ಬ ಆಚರಣೆ

ಇನ್ನೂ ನಗರದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆಯ ಬಳಿ ಮಕ್ಕಳು, ಮಹಿಳೆಯರು, ವೃದ್ಧರು ಎಲ್ಲರೂ ಆಗಮಿಸಿ ದೇವಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ಹಂಚಿಕೊಂಡು ಸಂಭ್ರಮದಿಂದ ದಸರಾ ಹಬ್ಬ ಆಚರಿಸಿದರು. ಇದಕ್ಕೂ ಮೊದಲು ನಗರಸಭೆಯಿಂದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆಯವರೆಗೆ ನಾಡದೇವಿಯ ಭಾವಚಿತ್ರ ಮೆರವಣಿಗೆ ಹಾಗೂ ಕಲಾ ತಂಡಗಳ ಪ್ರದರ್ಶನ ಅದ್ಧೂರಿಯಾಗಿ ನಡೆದಿದ್ದು, ಆ ನಂತರ ಹಬ್ಬವನ್ನು ಆಚರಿಸಲಾಯಿತು.

ಪ್ರತೀ ವರ್ಷ ಸಾಮೂಹಿಕವಾಗಿ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬನ್ನಿ ಕಟ್ಟೆಯ ರಸ್ತೆಯಲ್ಲಿ‌ ಝಗಮಗಿಸುವ ಲೈಟಿಂಗ್ ಹಾಕಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲಾಯಿತು.

Intro:ನಾಡಿನಾದ್ಯಂತ ಅದ್ಧೂರಿಯಾಗಿ ದಸರಾ ಹಬ್ಬ ಆಚತಣೆ ಮಾಡಲಾಗುತಿದ್ದು ಇತ್ತ ರಾಯಚೂರಿನಲ್ಲಿ ಯೂ ಸಾಮೂಹಿಕವಾಗಿ ದಸರಾ ಹಬ್ಬ ಆಚರಣೆ ಮಾಡಲಾಯಿತು.

Body:ನಗರದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆಯ ಬಳಿ ಎಲ್ಲರೂ ಸಾಮೂಹಿಕವಾಗಿ ಬನ್ನಿ ನೀಡಿ ದಸರಾ ಹಬ್ಬ ಆಚರಿಸಿದರು.ಮಕ್ಕಳು,ಮಹಿಳೆಯರು,ವೃದ್ಧರಾದಿಯಾಗಿ ಬನ್ನಿ ಕಟ್ಟೆಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ಹಂಚಿಕಿಂಡು ಸಂಭ್ರಮದಿಂದ ದಸರಾ ಹಬ್ಬ ಆಚರಿಸಿದರು.
ಪ್ರತಿ ವರ್ಷ ಸಾಮೂಹಿಕವಾಗಿ ನಡೆಯುವ ದಸರಾ ಹಬ್ಬ ಆಚರಣೆ ಮಾಡಲಾಗುತಿದ್ದು ಈ ಹಿನ್ನೆಲೆಯಲ್ಲಿ ಬನ್ನಿ ಕಟ್ಟೆಯ ರಸ್ತೆಯಲ್ಲಿ ಕಲರ್ ಫುಲ್ ಲೈಟಿಂಗ್ ಹಾಕಿ‌ ಝಗಮಗಿಸುವ ಲೈಟಿಂಗ್ ನಲ್ಲಿಯೇ ದಸರಾ ಹಬ್ಬ ಆಚರಿಸಿದರು.
ಇದಕ್ಕೂ ಮುಂಚೆ ನಗರಸಭೆಯಿಂದ ನಾಡದೇವಿಯ ಭಾವಚಿತ್ರ ಮೆರವಣಿಗೆ ಹಾಗೂ ಕಲಾ ತಂಡಗಳ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು, ನಗರಸಭೆಯಿಂದ ಮಾಣಿಕ್ ಪ್ರಭು ದೇವಸ್ಥಾನದ ಬನ್ನಿ ಕಟ್ಟೆವರೆಗೆ ಅದ್ಧೂರಿಯಾಗಿ ನಡೆಯಿತು ನಂತರ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಬನ್ನಿ ನೀಡಿ ದಸರಾ ಹಬ್ಬ‌ಆಚರಿಸಲಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.