ETV Bharat / state

ಕಲ್ಲಿದ್ದಿಲು ಆಧಾರಿತ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳು ಸ್ಥಗಿತ: ಸಂಕಷ್ಟದಲ್ಲಿ ಹಾರುಬೂದಿ ಆಶ್ರಯಿತ ಕೈಗಾರಿಕೆಗಳು

author img

By

Published : Aug 29, 2020, 1:22 PM IST

ವಿದ್ಯುತ್ ಬೆಡಿಕೆ ಕುಸಿತದಿಂದ ಕಲ್ಲಿದ್ದಿಲು ಆಧಾರಿತ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳು ಸ್ಥಗಿತಗೊಂಡಿದ್ದು, ಹಾರುಬೂದಿ ಆಶ್ರಯಿತ ಕೈಗಾರಿಕೆ, ಸಿಮೆಂಟ್ ಕಾರ್ಖಾನೆಗಳಿಗೆ ಸಂಕಷ್ಟ ಎದುರಾಗಿದೆ.

coal fired power plants shut down
ಕಲಿದ್ದಲ್ಲು ಆಧಾರಿತ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳು ಸ್ಥಗಿತ

ರಾಯಚೂರು: ಕಲ್ಲಿದ್ದಿಲು ಆಧಾರಿತ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಕುಸಿತಗೊಂಡು ಹಲವು ಕೇಂದ್ರಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ಇದರಿಂದ ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆಯಿಂದ ಬರುವ ಹಾರುಬೂದಿ ಆಶ್ರಯಿತ ಕೈಗಾರಿಕೆಗಳಿಗೆ, ಸಿಮೆಂಟ್ ಕಾರ್ಖಾನೆಗಳಿಗೆ ಬಿಸಿ ತಟ್ಟಿದೆ.

ರಾಜ್ಯದಲ್ಲಿನ ಬಹೇತಕ ಕಲ್ಲಿದ್ದಿಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. ಆದ್ರೆ ಈ ಶಾಖೋತ್ಪನ್ನ ಕೇಂದ್ರಗಳ ಮೇಲೆ ಆಧಾರವಾಗಿದ್ದ ಸಿಮೆಂಟ್ ಫ್ಯಾಕ್ಟರಿಗಳು ಸಂಕಷ್ಟಕ್ಕೆ ಸಿಲುಕಿಸಿವೆ. ರಾಯಚೂರಿನ ಶಕ್ತಿನಗರ ಬಳಿ ಆರ್​ಟಿಪಿಎಸ್​ನಿಂದಲೇ ನಿತ್ಯ ಕಲಬುರಗಿ, ಬಾಗಲಕೋಟೆ ಸೇರಿದಂತೆ ವಿವಿಧ ಸಿಮೆಂಟ್ ಕಾರ್ಖಾನೆಗಳು ಹಾಗೂ ಬ್ರಿಕ್ಸ್ ತಯಾರಿಕೆ ಕೈಗಾರಿಕೆಗಳು ನಿತ್ಯ ಹಾರುಬೂದಿಯ ಮೇಲೆ ಅಲಂಬಿತವಾಗಿವೆ. ಆದ್ರೆ ಕಳೆದ ಜುಲೈ ತಿಂಗಳನಿಂದ ವಿದ್ಯುತ್ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.

ಕಲ್ಲಿದ್ದಿಲು ಆಧಾರಿತ ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳು ಸ್ಥಗಿತ

ಆರ್​ಟಿಪಿಎಸ್ ಕೇಂದ್ರ ಒಟ್ಟು 8 ಘಟಕಗಳಿಂದ 1,720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಕಲ್ಲಿದ್ದಿಲು ಬಳಸಲಾಗುತ್ತಿದೆ. ಈ ಕಲ್ಲಿದ್ದಿಲಿನಿಂದ ಶೇ. 80ರಷ್ಟು ಹಾರುಬೂದಿ ಬರುತ್ತಿದ್ದರೆ, ಇನ್ನುಳಿದ ಶೇ. 20ರಷ್ಟು ಹಸಿಬೂದಿ ಬರುತ್ತದೆ. 8 ಘಟಕಗಳಿಂದ ವಿದ್ಯುತ್ ಉತ್ಪಾದಿಸಿದ್ರೆ ಪ್ರತಿನಿತ್ಯ ಸುಮಾರು 25 ಸಾವಿರ ಟನ್ ಕಲ್ಲಿದ್ದಿಲು ಬಳಕೆ ಮಾಡಲಾಗುತ್ತಿದೆ. ಇದರಿಂದ ಮೂರಿಂದ ನಾಲ್ಕು ಸಾವಿರ ಮೆಟ್ರಿಕ್ ಟನ್ ಹಾರುಬೂದಿ ಹೊರ ಬರುತ್ತದೆ. ಇದರಲ್ಲಿ ಹಸಿ ಬೂದಿಯನ್ನ ಹೊಂಡಗಳಿಗೆ ನೇರವಾಗಿ ಹರಿಸಿದ್ರೆ, ಹಾರು ಬೂದಿಯನ್ನ ಮಾತ್ರ ನೋಂದಾಯಿತ ನೂರಾರು ಸಿಮೆಂಟ್ ಕಾರ್ಖಾನೆಗಳಿಗೆ ಹಾಗೂ ಬ್ರಿಕ್ಸ್ ತಯಾರಿಸುವ ಸಣ್ಣ ಕೈಗಾರಿಕೆಗಳಿಗೆ ರವಾನಿಸುವ ಮೂಲಕ ಖಾಲಿ ಮಾಡಲಾಗುತ್ತದೆ.

ಆದ್ರೆ ಕಳೆದ ಜು. 5ರಿಂದ ಆರ್​​ಟಿಪಿಎಸ್ ಇತಿಹಾಸದಲ್ಲಿಯೇ 8 ಘಟಕಗಳ ವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತ ಮಾಡಿದ ಪರಿಣಾಮ ಹಾರುಬೂದಿ ಅವಲಂಬಿತ ಕೈಗಾರಿಕೆಗಳಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.