ರಾಯಚೂರು: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೀರುಪಾಕ್ಷಿ ಸಾಂಪ್ರದಾಯಿಕ ಹಾಗೂ ಸಂಸ್ಕೃತಿಯ ಪ್ರತೀಕವಾದ ಬಳೆ, ಸೀರೆ ತೋರಿಸಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ತಿರುಗೇಟು ನೀಡಿದ್ದಾರೆ.
15 ದಿನಗಳಲ್ಲಿ ರಸ್ತೆ ದುರಸ್ತಿ ಮಾಡದಿದ್ದರೇ, ಜಿಲ್ಲಾ ಉಸ್ತುವಾರಿ ಸಚಿವ ಸವದಿ ಹಾಗೂ ಶಾಸಕ ಪಾಟೀಲ್ ಅವರಿಗೆ ಸೀರೆ, ಬಳೆ ಕೊಡಿಸುತ್ತೇನೆ ಎಂದು ಹೇಳಿದ್ದರು.
ಮಹಿಳೆಯರು ಬಳಸು ವಸ್ತುಗಳ ಬಗ್ಗೆ ಮಾತಾನಾಡಿರುವುದು ಕೀಳು ಅಭಿರುಚಿ, ಸಂಸ್ಕೃತಿಯನ್ನು ತೋರಿಸುತ್ತದೆ. ಇದು ದುರಂತವೇ ಸರಿ ಎಂದು ಟೀಕಿಸಿದರು.
ನಗರಸಭೆಯ ಯಾವೊಬ್ಬ ಸದಸ್ಯರು ಒಂದು ರೂಪಾಯಿ ಅನುದಾನವನ್ನು ತೆಗೆದುಕೊಂಡಿಲ್ಲ. ಶಾಸಕರು ವಾರ್ಡ್‌ಗಳಿಗೆ ಅಗತ್ಯ ಮತ್ತು ಸದಸ್ಯರ ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದರು.
ಸತತ ಮಳೆಯಿಂದ ಯಾವುದೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಮಳೆಯು ಬಿಡುವು ನೀಡಿದ ಕೂಡಲೇ ಕಾಮಗಾರಿ ಪ್ರಾರಂಭವಾಗುವುದು ಎಂದು ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಸ್ಪಷ್ಟಪಡಿಸಿದರು.