ರಾಯಚೂರು: ವಿದ್ಯಾಗಮ ಯೋಜನೆಯಡಿ ನಡೆಯತ್ತಿರುವ ವಠಾರ ಶಾಲೆಗಳು ಅವ್ಯವಸ್ಥೆಯಿಂದ ಕೂಡಿದ್ದು, ಶಿಕ್ಷಣ ಇಲಾಖೆಯ ನಿಷ್ಕಾಳಜಿ ಎದ್ದು ಕಾಣುತ್ತಿದೆ.
ನಗರದ ಹೊರವಲಯದಲ್ಲಿರುವ ಯರಮರಸ್‌ನಲ್ಲಿ ವಿದ್ಯಾಗಮ ಯೋಜನೆಯಡಿ ಕಲಿಕೆಗೆ ಬರುತ್ತಿರುವ ಮಕ್ಕಳು ಮಾಸ್ಕ್ ಧರಿಸಿಲ್ಲ. ಅಕ್ಷರ ಕಲಿಯಲು ಬರುವ ಮಕ್ಕಳು ಮನೆಯಿಂದಲೇ ಸ್ಯಾನಿಟೈಸರ್, ಮಾಸ್ಕ್ ತರಬೇಕಾಗಿದ್ದು, ಶಿಕ್ಷಕರಲ್ಲೂ ಸಹ ಮಾಸ್ಕ್-ಸ್ಯಾನಿಟೈಸರ್ ಬಳಕೆ ಕಾಣುತ್ತಿಲ್ಲ.
ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಜನ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದ್ದು, ಐವರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.