ರಾಯಚೂರು: ಕುರ್ಕುರೆ ರೀತಿಯ ಸ್ಥಳೀಯ ಬ್ರ್ಯಾಂಡಿನ ತಿಂಡಿ ಪ್ಯಾಕೆಟ್ಗಳಲ್ಲಿ 500 ರೂಪಾಯಿ ಮುಖಬೆಲೆಯ ನೋಟ್ ಸಿಗ್ತಿದೆ ಎಂದು ಗುಲ್ಲೆದ್ದು ಗ್ರಾಮಸ್ಥರು ಖರೀದಿಗೆ ಮುಗಿಬಿದ್ದ ಘಟನೆ ಲಿಂಗಸೂಗೂರು ತಾಲೂಕಿನ ಹೂನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ವ್ಯಕ್ತಿಯೊಬ್ಬರು ಅಂಗಡಿಯಿಂದ 5 ರೂಪಾಯಿ ಕೊಟ್ಟು ತಿಂಡಿ ಪ್ಯಾಕೆಟ್ ಖರೀದಿಸಿದ್ದರು. ತಿನ್ನಲೆಂದು ಪ್ಯಾಕೆಟ್ ಒಡೆದಾಗ ಐನೂರರ ನೋಟ್ ಸಿಕ್ಕಿದೆ ಎಂದು ಜನರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದ ಗ್ರಾಮಸ್ಥರು ಖರೀದಿಗೆ ದುಂಬಾಲು ಬಿದ್ದಿದ್ದಾರೆ.
ಈ ಕುರಿತು ಮಾತನಾಡಿರುವ ಅಂಗಡಿ ಮಾಲೀಕ, 'ಸ್ಥಳೀಯ ತಿಂಡಿ ಪ್ಯಾಕೆಟ್ನಲ್ಲಿ ಗ್ರಾಮಸ್ಥರಿಗೆ ಈವರೆಗೂ ಒಟ್ಟು 40,000 ರೂಪಾಯಿಗಳಷ್ಟು ಹಣ ಸಿಕ್ಕಿದ್ದರಿಂದ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದರಿಂದಾಗಿ ಗ್ರಾಮದ ಯಾವುದೇ ಅಂಗಡಿಯಲ್ಲೂ ಸದ್ಯ ಸ್ನ್ಯಾಕ್ಸ್ ಪ್ಯಾಕೆಟ್ಗಳ ಸ್ಟಾಕ್ ಇಲ್ಲದಂತಾಗಿದೆ. ಪ್ಯಾಕೇಟ್ಗಳನ್ನು ತರುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರೊಬ್ಬರು ಮಾತನಾಡಿ, ತಮಗೂ ತಿಂಡಿ ಪ್ಯಾಕೆಟ್ಗಳಲ್ಲಿ ಸುಮಾರು 4,000 ರೂಪಾಯಿಯಷ್ಟು ಹಣ ಸಿಕ್ಕಿರುವುದಾಗಿ ಹೇಳಿದ್ದಾರೆ. ಆದರೆ ಪ್ಯಾಕೆಟ್ನಲ್ಲಿ 500 ರೂಪಾಯಿ ನೋಟ್ ಬರಲು ಹೇಗೆ ಸಾಧ್ಯ? ಎನ್ನುವುದು ಬೆಳಕಿಗೆ ಬರಬೇಕಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಚಿತ್ರದ ಸಂಗೀತ ಬಳಕೆ ಪ್ರಕರಣ: ತನಿಖೆಗೆ ಹೈಕೋರ್ಟ್ ತಡೆ