ರಾಯಚೂರು: ಜಿಲ್ಲೆಯಲ್ಲಿಂದು ಕೊರೊನಾ ರಣಕೇಕೆ ಹಾಕಿದೆ. ಒಂದೇ ದಿನ 257 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ 17 ಮಂದಿ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ರಾಯಚೂರು ತಾಲೂಕಿನಲ್ಲಿ-134, ಸಿಂಧನೂರು -46, ಮಾನವಿ- 43, ಲಿಂಗಸುಗೂರು- 30, ದೇವದುರ್ಗ ತಾಲೂಕಿನಲ್ಲಿ 4 ಜನ ಸೋಂಕಿತರು ಪತ್ತೆಯಾಗಿದ್ದಾರೆ. 1395 ಸೋಂಕಿತರ ಪೈಕಿ 783 ಜನರು ಗುಣಮುಖರಾಗಿದ್ದಾರೆ.
ಸೋಂಕಿತರು ಕ್ವಾರಂಟೈನ್ ಕೇರ್ ಹಾಗೂ ಐಸೋಲೋಷನ್ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.