ETV Bharat / state

ಮಕ್ಕಳು 10 ಗಂಟೆಗೆ ಬಂದ್ರೆ ಶಿಕ್ಷಕರು ಬರೋದು 12ಕ್ಕೆ... ನೋಡಿ ಸ್ವಾಮಿ ಇದು ಗಿರಿಜನ ಶಾಲೆಯ ಸ್ಥಿತಿ - kannadanews

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಡಂಚಿನ ವೆಂಕಟಗಿರಿ ಕಾಲೊನಿಯ ಗಿರಿಜನ ಶಾಲೆಗೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಶಿಕ್ಷಕರಿಗಾಗಿ ಕಾಯುತ್ತಿರುವ ಗಿರಿಜನ ಮಕ್ಕಳು
author img

By

Published : Jun 25, 2019, 7:40 PM IST

ಮೈಸೂರು: ಶಾಲೆಗೆ ಮಕ್ಕಳು ಚಕ್ಕರ್ ಹೊಡೆಯುವುದು ಸಹಜ, ಆದರೆ ಈ ಶಾಲೆಯಲ್ಲಿ ಶಿಕ್ಷಕರೇ ಚಕ್ಕರ್ ಹೊಡೆಯುತ್ತಾರೆ, ಮಕ್ಕಳು ಶಿಕ್ಷಕರಿಗಾಗಿ ಕಾಯುತ್ತಾರೆ. ಈ ಶಾಲೆ ಯಾವುದು ಎನ್ನುವ ಕುತೂಹಲವೇ ಹಾಗಾದರೆ ಈ ಸ್ಟೋರಿ ನೋಡಿ.

ಶಿಕ್ಷಕರಿಗಾಗಿ ಕಾಯುತ್ತಿರುವ ಗಿರಿಜನ ಮಕ್ಕಳು

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಡಂಚಿನ ವೆಂಕಟಗಿರಿ ಕಾಲೊನಿಯ ಶಾಲೆಯಲ್ಲಿ ಸುಮಾರು 42 ಗಿರಿಜನರ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಈ ಗಿರಿಜನ ಕಾಲೊನಿಯ ಶಾಲೆಯಲ್ಲಿ 4 ಜನ ಶಿಕ್ಷಕರು ಹಾಗೂ ಒಬ್ಬರು ಮುಖ್ಯೋಪಾಧ್ಯಾಯ ಕೂಡಾ ಇದ್ದಾರೆ. ಈ ಶಾಲೆ ಗಿರಿಜನ ಸರ್ಕಾರಿ ಆಶ್ರಮ ಶಾಲೆಯಾಗಿದ್ದು, ಈ ಶಾಲೆಗೆ ಮೇಲ್ವಿಚಾರಕರು ಹಾಗೂ ಒಬ್ಬ ವಾರ್ಡನ್ ಸಹ ಇದ್ದಾರೆ. ಈ ಗಿರಿಜನ ಆಶ್ರಮ ಶಾಲೆಗೆ 42 ಮಕ್ಕಳು 10 ಗಂಟೆಗೆ ಕರೆಕ್ಟಾಗಿ ಹಾಜರಾಗ್ತಾರೆ. ಆದರೆ, ಮಕ್ಕಳಿಗೆ ಶಿಕ್ಷಣ ಹಾಗೂ ಶಿಸ್ತು ಕಲಿಸಬೇಕಾದ ಶಿಕ್ಷಕರು ಮಾತ್ರ ಇಲ್ಲಿ ಬರೋದು 12 ಗಂಟೆಗೆ. ಶಾಲೆಯ ಬೀಗವನ್ನು ಮಕ್ಕಳೇ ತೆಗೆದು ಕಸ ಗುಡಿಸಿ, ಶಿಕ್ಷಕರಿಗಾಗಿ ದಾರಿ ಕಾಯ್ತಾರೆ. ಇದು ಇಲ್ಲಿನ ಮಕ್ಕಳ ನಿತ್ಯದ ಕಾಯಕ. ಮಕ್ಕಳಗಿಂತ ಮೊದಲು ಬಂದು, ಲೇಟಾಗಿ ಬಂದ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಬೇಕಾದ ನಾಲ್ವರು ಶಿಕ್ಷಕರು ಮಾತ್ರ ಪ್ರತಿ ದಿನ 12 ಗಂಟೆಗೆ ಬರುತ್ತಾರೆ, ಮಧ್ಯಾಹ್ನ 3 ಗಂಟೆಗೆ ಹೊರಟು ಹೋಗುತ್ತಾರೆ.

ಶಿಕ್ಷಕರ ನಡುವಿನ ಹೊಂದಾಣಿಕೆಯಿಂದ ದಿನದಲ್ಲಿ ಇಬ್ಬರು ಶಿಕ್ಷಕರು ಗೈರಾಗುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಯಾವುದೇ ಮೇಲಧಿಕಾರಿಗಳು ಈ ಗಡಿ ಭಾಗದ ಶಾಲೆಗೆ ಬರುವುದಿಲ್ಲ. ಇದರಿಂದ ಶಿಕ್ಷಕರು ತಮಗೆ ಇಷ್ಟಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಒಟ್ಟಿನಲ್ಲಿ ಮಕ್ಕಳಿಗೆ ವಿದ್ಯೆ ಜೊತೆಗೆ ಸಮಯಪ್ರಜ್ಞೆ, ಶಿಸ್ತುಗಳನ್ನು ಕಲಿಸಿಕೊಡಬೇಕಾದ ಶಿಕ್ಷಕರೇ ಈ ರೀತಿ ಸಮಯಕ್ಕೆ ಸರಿಯಾಗಿ ಶಾಲೆಗೆ ಬರದಿದ್ದರೆ ಇವರಿಂದ ಪಾಠ ಕಲಿಯುವ ಮಕ್ಕಳ ಭವಿಷ್ಯ ಏನಾಗಬಹುದು ಎಂಬ ಚಿಂತೆ ಕಾಡದಿರದು.

Intro:ಮೈಸೂರು: ಶಾಲೆಗೆ ಮಕ್ಕಳು ಚಕ್ಕರ್ ಹೊಡೆಯುವುದು ಸಹಜ, ಆದರೆ ಈ ಶಾಲೆಯಲ್ಲಿ ಶಿಕ್ಷಕರೇ ಚಕ್ಕರ್ ಹೊಡೆಯುತ್ತಾರೆ ಮಕ್ಕಳು ಶಿಕ್ಷಕರಿಗಾಗಿ ಕಾಯುತ್ತಾರೆ. ಈ ಶಾಲೆ ಯಾವುದು ಎನ್ನುವ ಕುತೂಹಲವೇ ಈ ಸ್ಟೋರಿ ನೋಡಿ.
Body:

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾಡಂಚಿನ ವೆಂಕಟಗಿರಿ ಕಾಲೋನಿಯ ಶಾಲೆಯಲ್ಲಿ ಸುಮಾರು ೪೨ ಗಿರಿಜನರ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ.
ಈ ಗಿರಿಜನ ಕಾಲೋನಿಯ ಶಾಲೆಯಲ್ಲಿ ೪ ಜನ ಶಿಕ್ಷಕರು ಒಬ್ಬ ಮುಖ್ಯೋಪಾಧ್ಯಾಯ ಇದ್ದು ಈ ಶಾಲೆ ಗಿರಿಜನ ಸರ್ಕಾರಿ ಆಶ್ರಮ ಶಾಲೆಯಾಗಿದ್ದು ಈ ಶಾಲೆಗೆ ಮೇಲ್ವಿಚಾರಕರು ಹಾಗೂ ಒಬ್ಬ ವಾರ್ಡನ್ ಸಹ ಇದ್ದಾರೆ.

ಸರಿಯಾಗಿ ಶಾಲೆಗೆ ಬರದ ಶಿಕ್ಷಕರು:- ಈ ಗಿರಿಜನ ಆಶ್ರಮ ಶಾಲೆಗೆ ೪೨ ಮಕ್ಕಳು ೧೦ ಗಂಟೆಗೆ ಬಂದರೆ ಶಿಕ್ಷಕರು ೧೨ ಗಂಟೆಗೆ ಬರುತ್ತಾರೆ. ಶಾಲೆಯ ಬೀಗವನ್ನು ಮಕ್ಕಳೇ ತೆಗೆದು ಶಾಲೆಯ ಕಸವನ್ನು ಹೊಡೆದು ಶಿಕ್ಷಕರಿಗಾಗಿ ಕಾಯುತ್ತಿರುತ್ತಾರೆ.‌ ೪ ಜನ ಶಿಕ್ಷಕರಲ್ಲಿ ಪ್ರತಿ ದಿನ ೧೨ ಗಂಟೆಗೆ ಬರುತ್ತಾರೆ ಮಧ್ಯಾಹ್ನ ೩ ಹೊರಟು ಹೋಗುತ್ತಾರೆ. ಶಿಕ್ಷಕರ ನಡುವಿನ ಹೊಂದಾಣಿಕೆಯಿಂದ ದಿನದಲ್ಲಿ ಇಬ್ಬರು ಶಿಕ್ಷಕರು ಗೈರಾಗುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಯಾವುದೇ ಮೇಲಾಧಿಕಾರಿಗಳು ಈ ಗಡಿ ಭಾಗದ ಶಾಲೆಗೆ ಬರುವುದಿಲ್ಲ ಇದರಿಂದ ಶಿಕ್ಷಕರು ತಮ್ಮ‌ ಮನಸ್ಸಿಗೆ ಬಂದ ರೀತಿ ನಡೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆಗ್ರಹಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.