ಮೈಸೂರು: ಸಾರಿಗೆ ಬಸ್ ನಿಲ್ದಾಣದಿಂದ ಬಸ್‌ಗಳನ್ನು ಬಿಡಲು ಮೊದಲು ಅವಕಾಶ ನೀಡಬೇಕೆಂಬ ಒತ್ತಾಯದ ಕಾರಣ ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್‌ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆಯಿತು.
ಸಾರಿಗೆ ನೌಕರರ ಮುಷ್ಕರ ಐದನೇ ಕಾಲಿಟ್ಟಿದೆ. ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದೇ ಖಾಸಗಿ ಬಸ್‌ಗಳು ಸೇವೆಯಲ್ಲಿವೆ. ಒಂದೊಂದಾಗಿ ಸಾರಿಗೆ ಬಸ್‌ಗಳು ರಸ್ತೆಗಿಳಿಯುತ್ತಿದ್ದು ಖಾಸಗಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಆಕ್ರೋಶಗೊಂಡಿದ್ದಾರೆ.
ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್‌ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ ಬಂದು ಏಕಾಏಕಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಂಚರಿಸಲು ಬಿಟ್ಟರೆ ನಮ್ಮ ಗತಿಯೇನು? ನಮ್ಮನ್ನು ಉಪಯೋಗಿಸಿಕೊಂಡು ಬಿಸಾಡುತ್ತೀರಾ? ನಾಲ್ಕು ದಿನಗಳಿಂದ ನಾವು ಸೇವೆ ನೀಡುತ್ತಿದ್ದೇವೆ. ಈಗ ಬಂದಿರೋ ಕೆಎಸ್‌ಆರ್‌ಟಿಸಿ ಬಸ್ ಭರ್ತಿಯಾದರೆ ನಾವು ಏನ್ ಮಾಡೋದು? ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ನಮ್ಮ ಬಸ್‌ಗಳನ್ನು ಮೊದಲು ಬಿಡಿ, ಆಮೇಲೆ ನಿಮ್ಮ ಬಸ್‌ಗಳು ಹೊರಡಲಿ. ಖಾಸಗಿ ಬಸ್‌ಗಳ ಮಾಲೀಕರಿಗೂ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿದರು.