ETV Bharat / state

ತಿ ನರಸೀಪುರ ಕ್ಷೇತ್ರದ 'ಕೈ' ಟಿಕೆಟ್​ ಆಕಾಂಕ್ಷಿಯಾಗಿ ಸುನೀಲ್ ಬೋಸ್ ಅರ್ಜಿ - Former Minister Dr HC Mahadevappa

ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್​ ಆಕಾಂಕ್ಷಿಯಾಗಿರುವ ನನಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನನ್ನ ಗೆಲುವು ಖಚಿತ ಎಂದು ಸುನೀಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Congress ticket aspirant Sunil Bose
ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ಸುನೀಲ್​ ಬೋಸ್​
author img

By

Published : Nov 17, 2022, 1:30 PM IST

ಮೈಸೂರು: ಮಾಜಿ‌ ಸಚಿವ ಡಾ ಹೆಚ್ ಸಿ ಮಹದೇವಪ್ಪ ಪ್ರತಿನಿಧಿಸುತ್ತಿದ್ದ ತಿ ನರಸೀಪುರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತನಗೆ ಟಿಕೆಟ್ ನೀಡುವಂತೆ ಕೋರಿ ಅವರ ಪುತ್ರ ಸುನೀಲ್ ಬೋಸ್​ ಅರ್ಜಿ ಹಾಕಿದ್ದಾರೆ.

ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ಸುನೀಲ್​ ಬೋಸ್​

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ತಿ ನರಸೀಪುರ ಕ್ಷೇತ್ರದಿಂದ ನಾನು ಒಬ್ಬ ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಅರ್ಜಿ ಹಾಕಿದ್ದೇನೆ‌. ಹೈಕಮಾಂಡ್ ಅರ್ಜಿ ಹಾಕಲು ಸೂಚನೆ ನೀಡಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್​ ಆಕಾಂಕ್ಷಿಯಾಗಿರುವ ನನಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಹೀಗಾಗಿ, ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಈಗಾಗಲೇ ಕ್ಷೇತ್ರದ ಜನರು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಭರವಸೆಗಳಿಂದ ಬೇಸತ್ತಿದ್ದಾರೆ‌ ಎಂದರು‌.

ಇದನ್ನೂ ಓದಿ: ವರುಣದಿಂದ ಟಿಕೆಟ್ ಬಯಸಿ ಯತೀಂದ್ರ ಅರ್ಜಿ: ಸಿದ್ದರಾಮಯ್ಯ ನಡೆಯದ್ದೇ ಕುತೂಹಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.