ETV Bharat / state

ತಮ್ಮ ಏರಿಯಾಗೆ ಯಾರು ಪ್ರವೇಶಿಸದಂತೆ ತಾವೆ ಸೀಲ್ ಡೌನ್ ಮಾಡಿಕೊಂಡ ನಿವಾಸಿಗಳು - ಸೀಲ್ ಡೌನ್ ಮಾಡಿಕೊಂಡ ನಿವಾಸಿಗಳು

ಕೊರೊನಾದ ಹಾಟ್ ಸ್ಪಾಟ್ ಆಗಿ ರೆಡ್ ಝೋನ್ ನಲ್ಲಿ ಇರುವ ಸಾಂಸ್ಕೃತಿಕ ನಗರಿಯ ಜನರಲ್ಲಿ ಭಯ, ಆತಂಕ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಉಪ್ಪಿನ ಕೇರಿಯ ಒಂದರಿಂದ ಮೂರನೆ ಕ್ರಾಸ್ ನ ಪ್ರದೇಶವನ್ನು ಸ್ಥಳೀಯರೆ ಸೀಲ್ ಡೌನ್ ಮಾಡಿಕೊಂಡಿಕೊಂಡಿದ್ದಾರೆ.

Residents have sealed down their access to the area
ನಿವಾಸಿಗಳಿಂದಲೇ ತಮ್ಮ ಏರಿಯಾ ಸೀಲ್ ಡೌನ್
author img

By

Published : Apr 17, 2020, 11:48 AM IST

Updated : Apr 17, 2020, 12:32 PM IST

ಮೈಸೂರು: ಹೊರಗಿನ‌ ವ್ಯಕ್ತಿಗಳು ಅನವಶ್ಯಕವಾಗಿ ತಮ್ಮ ಏರಿಯಾಗೆ ಪ್ರವೇಶಿಸದಂತೆ ಸ್ಥಳೀಯ ನಿವಾಸಿಗಳೇ ಸೀಲ್ ಡೌನ್ ಮಾಡಿರುವ ಘಟನೆ ನಗರದ ಉಪ್ಪಿನ ಕೇರಿಯಲ್ಲಿ ನಡೆದಿದೆ.

ಕೊರೊನಾದ ಹಾಟ್ ಸ್ಪಾಟ್ ಆಗಿ ರೆಡ್ ಝೋನ್ ನಲ್ಲಿ ಇರುವ ಸಾಂಸ್ಕೃತಿಕ ನಗರಿಯ ಜನರಲ್ಲಿ ಭಯ, ಆತಂಕ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಉಪ್ಪಿನ ಕೇರಿಯ ಒಂದರಿಂದ ಮೂರನೇ ಕ್ರಾಸ್ ನ ಪ್ರದೇಶವನ್ನು ಸ್ಥಳೀಯರು ತಮ್ಮಲ್ಲಿ ಇರುವ ಪ್ಲೈವುಡ್, ಮರ, ತಗಡು, ಕಲ್ಲು ಸೇರಿದಂತೆ ಹಲವಾರು ವಸ್ತುಗಳಿಂದ ತಮ್ಮ ಬಡಾವಣೆಗೆ ಬರುವ ಪ್ರಮುಖ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದಾರೆ.

ನಿವಾಸಿಗಳಿಂದಲೇ ತಮ್ಮ ಏರಿಯಾ ಸೀಲ್ ಡೌನ್

ಹೊರಗಿನಿಂದ ಯಾವುದೇ ವ್ಯಕ್ತಿಗಳು ಬರದಂತೆ ನಿರ್ಬಂಧ ವಿಧಿಸಿದ್ದು , ಈ ನಿರ್ಬಂಧವನ್ನು ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಿದ್ದಾರೆ, ಯಾರಾದರೂ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲು ಹೋಗಬೇಕಾದರೆ ದ್ವಿಚಕ್ರ ವಾಹನವನ್ನು ಬಳಸದಂತೆ ತಿಳಿಸಿದ್ದು , ಅವರು ಕಾಲ್ನಡಿಗೆಯಲ್ಲೆ ನಡೆದುಕೊಂಡು ಹೋಗಬೇಕೆಂದು ತಿಳಿಸಲಾಗಿದೆ. ಪೊಲೀಸರಿಗಿಂತ ಜನರೆ ಎತ್ತೆಚ್ಚುಕೊಂಡು ತಮ್ಮ ಏರಿಯಾವನ್ನು ಸೀಲ್ ಡೌನ್ ಮಾಡಿಕೊಂಡಿರುವ ಮೊದಲ ಘಟನೆ ಇದಾಗಿದೆ.

Last Updated : Apr 17, 2020, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.