ETV Bharat / state

ಸಂಸತ್​ ಭದ್ರತಾ ಲೋಪ ಪ್ರಕರಣ: ಮೈಸೂರಿನಲ್ಲಿ ಮನೋರಂಜನ್​​ ಸ್ನೇಹಿತರ ವಿಚಾರಣೆ - ​ ETV Bharat Karnataka

ಆರೋಪಿ ಮನೋರಂಜನ್ ಮೈಸೂರಿನವನಾದ ಕಾರಣ ನಗರದಲ್ಲಿ ಆತನ ಇಬ್ಬರು ಸ್ನೇಹಿತರನ್ನು ದೆಹಲಿ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ.

ಮನೋರಂಜನ್​
ಮನೋರಂಜನ್​
author img

By ETV Bharat Karnataka Team

Published : Dec 27, 2023, 6:19 AM IST

ಮೈಸೂರು: ಸಂಸತ್​ನಲ್ಲಿ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿ ಮೈಸೂರಿನ ಮನೋರಂಜನ್​ನ ಇಬ್ಬರು ಸ್ನೇಹಿತರನ್ನು ನಗರದ ಎರಡು ಕಡೆ ದೆಹಲಿಯ ವಿಶೇಷ ಪೊಲೀಸ್ ತಂಡ ವಿಚಾರಣೆಗೆ ನಡೆಸಿತು. ಮನೋರಂಜನ್ ಮನೆಯಲ್ಲೂ ವಿಚಾರಣೆ ಮುಂದುವರಿದಿದೆ.

ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಸ್ಮೋಕ್​ ಬಾಂಬ್​ ಸಿಡಿಸಿದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮನೋರಂಜನ್ ಮನೆಯಲ್ಲಿ ಇಂದೂ ಸಹ ದೆಹಲಿ ಪೋಲಿಸರ ತನಿಖಾ ತಂಡ ಆಗಮಿಸಿ ಆರೋಪಿಯ ತಂದೆ ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿದೆ. ಕಳೆದ 13 ದಿನಗಳಿಂದಲೂ ವಿಚಾರಣೆ ನಡೆಯುತ್ತಿದೆ. ಮನೋರಂಜನ್ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಆರೋಪಿಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಇತರ ವಸ್ತುಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಬೈಕ್‌ನಲ್ಲಿ ತನಿಖಾ ತಂಡ ಸಂಚಾರ: ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗಮಿಸಿರುವ ವಿಶೇಷ ತಂಡ, ಪೊಲೀಸ್ ಜೀಪ್ ಹಾಗೂ ಇತರ ವಾಹನಗಳನ್ನು ಬಳಸದೇ ಬೈಕ್​ನಲ್ಲೇ ಸಂಚಾರ ಮಾಡುತ್ತಿದೆ. ಮನೋರಂಜನ್​ ಹೇರ್​ ಕಟ್​ ಮಾಡಿಸುತ್ತಿದ್ದ ಕಟಿಂಗ್ ಶಾಪ್ ಮಾಲೀಕರನ್ನೂ ಎರಡು ದಿನಗಳ ಕಾಲ ವಿಚಾರಣೆ ಮಾಡಲಾಗಿತ್ತು.

ಆ ನಂತರ ಮನೋರಂಜನ್​ನ ಇಬ್ಬರು ಸ್ನೇಹಿತರನ್ನು ನಗರದ ವಿದ್ಯಾರಣ್ಯಪುರಂನಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಈ ಸಂದರ್ಭದಲ್ಲಿ ಅವರಿಂದ ಮನೋರಂಜನ್​ಗೆ ಸಂಬಂಧಿಸಿದ ಕೆಲವು ಮಾಹಿತಿ ಪಡೆದಿದ್ದಾರೆ. ಈ ಮಧ್ಯೆ ಇಂದು ಬೆಳಿಗ್ಗೆ ಬೈಕ್​ನಲ್ಲಿ ಮನೋರಂಜನ್ ತಂದೆ ವಾಸವಿರುವ ವಿಜಯನಗರದ ಎರಡನೇ ಹಂತದ ಮನೆಗೆ ಆಗಮಿಸಿದ ತಂಡ ಮತ್ತೆ ವಿಚಾರಣೆಗೆ ನಡೆಸಿತು. ಜೊತೆಗೆ ಮನೋರಂಜನ್ ತನ್ನ ದೆಹಲಿಯ ಸ್ನೇಹಿತ ಸಾಗರ್ ಶರ್ಮಾ ಮೈಸೂರಿಗೆ ಆಗಮಿಸಿದಾಗ ಆತ ಯಾವ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಎಂಬ ಮಾಹಿತಿಯನ್ನೂ ಕಲೆ ಹಾಕಿದೆ.

ತನಿಖಾ ದೃಷ್ಟಿಯಿಂದ ಪೊಲೀಸರ ವಶದಲ್ಲಿರುವ ಮನೋರಂಜನ್ ನೀಡಿದ ಮಾಹಿತಿಗಳ ಆಧಾರದ ಮೇಲೆ ಮೈಸೂರಿನಲ್ಲಿರುವ ವಿಶೇಷ ಪೊಲೀಸ್ ದಳ ಕಾರ್ಯಾಚರಣೆ ನಡೆಸುತ್ತಿದೆ. ಇನ್ನೂ ಕೆಲವು ಮನೋರಂಜನ್ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಎನ್ನಲಾಗಿದೆ.

ಇದನ್ನೂ ಓದಿ: ಮನೋರಂಜನ್​ ಜೊತೆಗಿನ ಸಂಬಂಧವನ್ನು ಪ್ರತಾಪ್ ಸಿಂಹ ಮೊದಲು ಹೇಳಬೇಕು: ಎಂ.ಲಕ್ಷ್ಮಣ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.