ETV Bharat / state

ಎರಡು ತಿಂಗಳಲ್ಲಿ ಮುಂದಿನ ರಾಜಕೀಯದ ಬಗ್ಗೆ ತೀರ್ಮಾನ: ಶಾಸಕ ಜಿ.ಟಿ ದೇವೇಗೌಡ - statement of minister GT Devegowda about his politics

ಜೆ.ಡಿ.ಎಸ್ ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರು ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಎರಡು ತಿಂಗಳುಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

next-political-decision-will-be-taken-in-two-months-says-mla-gt-deve-gowda
ಎರಡು ತಿಂಗಳಲ್ಲಿ ಮುಂದಿನ ರಾಜಕೀಯ ತೀರ್ಮಾನ: ಶಾಸಕ ಜಿ.ಟಿ ದೇವೇಗೌಡ
author img

By

Published : Jul 4, 2022, 3:46 PM IST

ಮೈಸೂರು: ಮುಂದಿನ ಎರಡು ತಿಂಗಳಲ್ಲಿ ನನ್ನ ಕ್ಷೇತ್ರದ ಜನರ ಸಭೆ ಕರೆದು ರಾಜಕೀಯ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆ.ಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮುಂದಿನ ರಾಜಕೀಯ ತೀರ್ಮಾನವನ್ನು ಇನ್ನು ಎರಡು ತಿಂಗಳುಗಳಲ್ಲಿ ಕೈಗೊಳ್ಳುತ್ತೇನೆ ಎಂದರು.

ಈ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಸಭೆ ಕರೆದು ಅವರ ಅಭಿಪ್ರಾಯ ಪಡೆದು ರಾಜಕೀಯ ತೀರ್ಮಾನ ಪ್ರಕಟಿಸುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ 5 ವರ್ಷದಿಂದ ನಾನು ಜೆ.ಡಿ.ಎಸ್ ಶಾಸಕನಾಗಿದ್ದೇನೆ. ಹೀಗಾಗಿ ನಾನು ಯಾವುದೇ ಸಂದರ್ಭದಲ್ಲೂ ಜೆ.ಡಿ.ಎಸ್ ವಿರುದ್ಧ ಮತ ಹಾಕಿಲ್ಲ. ನನ್ನ ಆತ್ಮಸಾಕ್ಷಿ ವಿರುದ್ಧವಾಗಿ ನಡೆದುಕೊಂಡಿಲ್ಲ. ಆದರೆ ಕಳೆದ 3 ವರ್ಷಗಳಿಂದ ಜೆ.ಡಿ.ಎಸ್ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ನಾನು ಭಾಗವಹಿಸಿಲ್ಲ ಎಂದು ಶಾಸಕರು ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ : ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.