ಮೈಸೂರು: ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನು ತಪ್ಪುತಪ್ಪಾಗಿ ಮುದ್ರಿಸಿದ್ದ ಮಹಾನಗರ ಪಾಲಿಕೆ, ಸಾರ್ವಜನಿಕರ ಟೀಕೆಗಳ ಪರಿಣಾಮ ಎಚ್ಚೆತ್ತುಕೊಂಡಿದೆ.
ನಜರ್ಬಾದ್ನಲ್ಲಿ ಮಹಾನಗರ ಪಾಲಿಕೆಯು ಮಾರ್ಗಸೂಚಿ ಫಲಕಗಳನ್ನು ಅಳವಡಿಸಿ 'ಮಧ್ಯಪಾನ ಮಾಡಿ ವಾಹನ ಚಲಾಹಿಸಬೇಡ' ಎಂದು ತಪ್ಪಾಗಿ ಬರೆಯಲಾಗಿತ್ತು. ಅಲ್ಲದೇ ಮಾರ್ಗಸೂಚಿಯಲ್ಲಿ ಇಂಗ್ಲಿಷ್ನಲ್ಲಿಯೇ ವಿಳಾಸ ತೋರಿಸಲಾಗಿತ್ತು. ಈ ಸಂಬಂಧ ‘ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಿದ ಮಹಾನಗರ ಪಾಲಿಕೆ’ ಎಂಬ ಶೀರ್ಷಿಕೆಯಡಿ 'ಈಟಿವಿ ಭಾರತ' ಸುದ್ದಿ ಬಿತ್ತರಿಸಿತ್ತು.
ಈ ವರದಿಯಿಂದ ಎಚ್ಚೆತ್ತ ನಗರ ಪಾಲಿಕೆ 'ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ' ಎಂದು ಅಕ್ಷರಗಳನ್ನು ಸರಿಪಡಿಸಿ ಹಾಗೂ ವಿಳಾಸವನ್ನು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಮುದ್ರಿಸಿದೆ.