ETV Bharat / state

ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದ ಮೈಸೂರು ಮಹಾನಗರ ಪಾಲಿಕೆ

author img

By

Published : Apr 4, 2023, 2:29 PM IST

ಮೈಸೂರು ಮನಹಾಗರ ಪಾಲಿಕೆ 2022-23ನೇ ಹಣಕಾಸು ವರ್ಷದಲ್ಲಿ ದಾಖಲೆಯ ತೆರಿಗೆ ಸಂಗ್ರಹಿಸಿದೆ.

Mysuru City Corporation
ಮೈಸೂರು ಮಹಾನಗರ ಪಾಲಿಕೆ

ಮೈಸೂರು: ಕಳೆದ 2022-23ನೇ ಆರ್ಥಿಕ ವರ್ಷದಲ್ಲಿ ಮೈಸೂರು ಮಹಾನಗರ ಪಾಲಿಕೆ 310 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಆ ಮೂಲಕ ತಾನು ನಿರ್ವಹಣೆ ಮಾಡುವ ಬಾಬ್ತುಗಳಿಗೆ, ಆರ್ಥಿಕ ಶಕ್ತಿಯನ್ನು ಕ್ರೂಢೀಕರಿಸಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಅನುದಾನವನ್ನು ಅವಲಂಬಿಸದೇ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವ ಮಹತ್ವದ ಹೆಜ್ಜೆ ಇಟ್ಟಿದೆ.

ಯಾವ ಯಾವ ಬಾಬ್ತುಗಳಿಂದ ತೆರಿಗೆ ಸಂಗ್ರಹ?: ಪಾಲಿಕೆಯಿಂದ ಸಾಮಾನ್ಯವಾಗಿ ಎಲ್ಲಾ ಕಡೆ ಸೋರಿಕೆ, ಅನಗತ್ಯ ವೆಚ್ಚ, ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂಬ ಮಾತನ್ನು ಕೇಳುತ್ತಿರುತ್ತೇವೆ. ಇದಕ್ಕೆ ತದ್ವಿರುದ್ಧ ಎಂಬಂತೆ ಮೈಸೂರಿನ ಮಹಾನಗರ ಪಾಲಿಕೆ, ಸ್ವಚ್ಛತೆಯಲ್ಲಿ ದೇಶದಲ್ಲೇ ಹೆಸರು ಮಾಡಿರುವ ಪಾಲಿಕೆ. ಈಗ ತೆರಿಗೆ ಸಂಗ್ರಹದಲ್ಲೂ ಸಾಧನೆ ಮಾಡಿದೆ. ಕಳೆದ ಆರ್ಥಿಕ ವರ್ಷವಾದ 2022-23ನೇ ವರ್ಷದಲ್ಲಿ 310.49 ಕೋಟಿ ರೂ.ಗಳನ್ನು ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹ ಮಾಡಿದೆ. ಅದರಲ್ಲಿ 16,900 ಲಕ್ಷ ಆಸ್ತಿ ತೆರಿಗೆ, 9,310 ಲಕ್ಷ ರೂ. ನೀರಿನ ಶುಲ್ಕ, 1440 ಲಕ್ಷ ರೂ. ಅನುಮೋದನ ಶುಲ್ಕ, 668 ಲಕ್ಷ ರೂ. ಟ್ರೇಡ್ ಲೈಸೆನ್ಸ್ ಫೀಸ್, 368 ಲಕ್ಷ ರೂ. ವಾಣಿಜ್ಯ ಮಳಿಗೆಗಳ ಬಾಡಿಗೆ, 64 ಲಕ್ಷ ರೂ. ಜಾಹೀರಾತು ಶುಲ್ಕ ಹಾಗೂ 2313 ಲಕ್ಷ ರೂ. ವಿವಿಧ ಬಾಬ್ತುಗಳಿಂದ ತೆರಿಗೆ ಸಂಗ್ರಹ ಮಾಡಿ ಪಾಲಿಕೆಯ ಇತಿಹಾಸದಲ್ಲೇ ದಾಖಲೆ ಬರೆದಿದೆ.

ಇದನ್ನೂ ಓದಿ: ಬಿಬಿಎಂಪಿ 8 ವಲಯಗಳ ವ್ಯಾಪ್ತಿಯಲ್ಲಿ 1,471 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಬಾಕಿ

ಮೈಸೂರು ಮಹಾನಗರ ಪಾಲಿಕೆ ನಾಗರಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ ನಿರ್ವಹಣೆ, ಸ್ವಚ್ಚತೆ, ರಸ್ತೆಗಳ ನಿರ್ವಹಣೆ, ಪಾರ್ಕ್​ಗಳ ಅಭಿವೃದ್ಧಿ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಇತರ ಖರ್ಚುಗಳು ಪ್ರತಿ ವರ್ಷ ಹೆಚ್ಚಾಗುತ್ತಲೇ ಇರುತ್ತವೆ. ಇವುಗಳ ನಿರ್ವಹಣೆಗೆ ಪಾಲಿಕೆಯಿಂದ ಹಣಕಾಸು ಸರಿದೂಗಿಸುವುದೇ ಸವಾಲಾಗಿದ್ದು, ಇದಕ್ಕೆ ತೆರಿಗೆ ವಸೂಲಿ ಮುಖ್ಯವಾಗಿ ಆಗಬೇಕು. ಆದ್ದರಿಂದ ತೆರಿಗೆ ವಸೂಲಿಗೆ ಪಾಲಿಕೆ ಆನ್​ಲೈನ್ ವ್ಯವಸ್ಥೆ ಹಾಗೂ ಕೆಲವು ರಿಯಾಯಿತಿಗಳನ್ನು ನೀಡುವ ಮೂಲಕ ಪಾಲಿಕೆ ಕಳೆದ ವರ್ಷ ದಾಖಲೆಯ ತೆರಿಗೆ ಸಂಗ್ರಹ ಮಾಡಿದೆ.

ಈ ಬಗ್ಗೆ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ. ಕೋವಿಡ್ ನಂತರ ತೆರಿಗೆ ಸಂಗ್ರಹ ಸ್ವಲ್ಪ ಕಷ್ಟವಾಗಿತ್ತು. ಆನಂತರ ಆಸ್ತಿ ತೆರಿಗೆ ಹಾಗೂ ನೀರಿನ ಸುಂಕ ಸೇರಿದಂತೆ ಕಂದಾಯ ವಸೂಲಿಯಲ್ಲಿ ಪಾಲಿಕೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದರು. ಆ ಮೂಲಕ ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ತೆರಿಗೆ ಸಂಗ್ರಹ ಆಗಿದ್ದು, ಇದರಿಂದ ನಿರ್ವಹಣೆ ಹಾಗೂ ಅಭಿವೃದ್ಧಿ ಕೆಲಸ ಸುಲಭವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: 2 ತಿಂಗಳಲ್ಲಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹ: ಬಿಬಿಎಂಪಿಯಿಂದ ಭರ್ಜರಿ ಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.