ETV Bharat / state

ಆಪ್ಟಿಕಲ್ ಕೇಬಲ್ ಅಳವಡಿಕೆಗೆ ರಸ್ತೆ ಅಗೆದ ಜಿಯೋ ಸಂಸ್ಥೆಗೆ ಮೈಸೂರು ಪಾಲಿಕೆ ದಂಡ

author img

By

Published : Dec 18, 2019, 12:08 PM IST

ಆಪ್ಟಿಕಲ್​ ಫೈಬರ್ ಕೇಬಲ್ ಅಳವಡಿಸು ವೇಳೆ ಷರತ್ತು ಉಲ್ಲಂಘಿಸಿರುವ ಹಿನ್ನೆಲಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಂ ಲಿಮಿಟೆಡ್‌ಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.

Mysuru City Corporation fined to Jio Compnay
ಜಿಯೋ ಕಂಪನಿಗೆ ದಂಡ ವಿಧಿಸಿದ ಮೈಸೂರು ನಗರ ಪಾಲಿಕೆ

ಮೈಸೂರು: ಆಪ್ಟಿಕಲ್​ ಫೈಬರ್ ಕೇಬಲ್ ಅಳವಡಿಸು ವೇಳೆ ಷರತ್ತು ಉಲ್ಲಂಘಿಸಿರುವ ಹಿನ್ನೆಲಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಂ ಲಿಮಿಟೆಡ್‌ಗೆ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.

ಜಿಯೋ ಕಂಪನಿಗೆ ದಂಡ ವಿಧಿಸಿದ ಮೈಸೂರು ನಗರ ಪಾಲಿಕೆ, Mysuru City Corporation fined to Jio Compnay
ಜಿಯೋ ಕಂಪನಿಗೆ ದಂಡ ವಿಧಿಸಿದ ಮೈಸೂರು ನಗರ ಪಾಲಿಕೆ

ಬಸವನಗುಡಿ ಸರ್ಕಲ್, ಕುಂಬಾರ ಕೊಪ್ಪಲು ಮುಖ್ಯರಸ್ತೆ, ಹೆಬ್ಬಾಳು ಮುಖ್ಯ ರಸ್ತೆ, ಬಲ್ಲಾಳ್ ಸರ್ಕಲ್, ಅಂಬೇಡ್ಕರ್ ರಸ್ತೆ, ಮಾನಂದವಾಡಿ ರಸ್ತೆ, ಜೆಎಲ್‌ಬಿ ರಸ್ತೆ, ಆದಿಚುಂಚನಗಿರಿ ರಸ್ತೆ, ಉದಯರವಿ ರಸ್ತೆ, ಜಯಲಕ್ಷ್ಮಿಪುರಂ ಗೋಕುಲಂ ಮುಖ್ಯ ರಸ್ತೆ, ಗೋಕುಲಂ ಕಾಂಟೂರ್ ರಸ್ತೆ, ಕಾಂತರಾಜ್ ಅರಸ್ ಪಾರ್ಕ್ ಹತ್ತಿರದ ರಸ್ತೆ, ಗಾಂಧಿನಗರ ಬಡಾವಣೆ ವ್ಯಾಪ್ತಿಯಲ್ಲಿ ಕೇಬಲ್​ ಅಳವಡಿಸುವಾಗ ರಸ್ತೆಗಳನ್ನು ಹಾಳು ಮಾಡಿರುವುದರ ಜೊತೆಗೆ ನಗರಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿರುವುದರಿಂದ ಪ್ರತಿ ರಸ್ತೆಗೆ 10 ಸಾವಿರದಂತೆ ದಂಡ ವಿಧಿಸಿ ಆದೇಶಿಸಿದೆ.

ದಂಡದ ಮೊತ್ತವನ್ನು ಚಲನ್ ಮೂಲಕ ವಲಯ ಕಚೇರಿಗಳಲ್ಲಿ ತೆರೆದಿರುವ ಬ್ಯಾಂಕ್‌ನಲ್ಲಿ ಜಮಾ ಮಾಡಲು. ಮತ್ತು ಹಾಳಾಗಿರುವ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಲು ಸೂಚಿಸಿದೆ. ಹಾಗೂ ಇನ್ನು ಮುಂದೆ ವಲಯ ಕಚೇರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದ ನಂತರ ವಲಯ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿ ನಿರ್ವಹಿಸಬೇಕು. ಈ ಸೂಚನೆಯನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ದಂಡBody:ಮೈಸೂರು;ಓಎಫ್‌ಸಿ ಕೇಬಲ್ ಅಳವಡಿಸುವ ಕಾರ್ಯದಲ್ಲಿ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಂ ಲಿಮಿಟೆಡ್‌ಗೆ  ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.
ಬಸವನಗುಡಿ ಸರ್ಕಲ್, ಕುಂಬಾರಕೊಪ್ಪಲು ಮುಖ್ಯರಸ್ತೆ, ಹೆಬ್ಬಾಳು ಮುಖ್ಯ ರಸ್ತೆ,, ಬಲ್ಲಾಳ್ ಸರ್ಕಲ್, ಅಂಬೇಡ್ಕರ್ ರಸ್ತೆ, ಮಾನಂದವಾಡಿ ರಸ್ತೆ, ಜೆಎಲ್‌ಬಿ ರಸ್ತೆ, ಆದಿಚುಂಚನಗಿರಿ ರಸ್ತೆ, ಉದಯರವಿ ರಸ್ತೆ, ಜಯಲಕ್ಷ್ಮಿಪುರಂ ಗೋಕುಲಂ ಮುಖ್ಯ ರಸ್ತೆ, ಗೋಕುಲಂ ಕಾಂಟೂರ್ ರಸ್ತೆ, ಕಾಂತರಾಜ್ ಅರಸ್ ಪಾರ್ಕ್ ಹತ್ತಿರದ ರಸ್ತೆ, ಗಾಂಧಿನಗರ  ಬಡಾವಣೆ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಹಾಳು ಮಾಡಿರುವುದರ ಜೊತೆಗೆ ನಗರಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವುದರಿಂದ, ಪ್ರತಿ ರಸ್ತೆಗೆ ೧೦ಸಾವಿರದಂತೆ ದಂಡ ವಿಧಿಸಿ ಆದೇಶಿಸಿದೆ.
ಆಯಾ ವಲಯ ಅಭಿವೃದ್ಧಿ ಅಧಿಕಾರಿಯಿಂದ ಉಲ್ಲಂಘನೆ ಆಗಿರುವ ದಂಡದ ಮೊತ್ತಕ್ಕೆ ಚಲನ್ ಹಾಕಿಸಿಕೊಂಡು ದಂಡದ ಮೊತ್ತವನ್ನು ತಕ್ಷಣ ಆಯಾಯ ವಲಯ ಕಚೇರಿಗಳಲ್ಲಿ ತೆರೆದಿರುವ ಬ್ಯಾಂಕ್‌ನಲ್ಲಿ ಜಮಾ ಮಾಡಲು ಸೂಚಿಸಿದೆ. ಹಾಳಾಗಿರುವ ರಸ್ತೆಗಳನ್ನು ತುರ್ತುಗಿ ರೆಸ್ಟೋರೇಷನ್ ಮಾಡಲು ತಿಳಿಸಲಾಗಿದೆ.
ಇನ್ನು ಮುಂದೆ ವಲಯ ಕಚೇರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದ ನಂತರ ಆಯಾಯ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಕಾಮಗಾರಿ ನಿರ್ವಹಿಸಲು ಸೂಚಿಸಿದೆ. ಈ ಸೂಚನೆಯನ್ನು ಉಲ್ಲಂಘಿಸಿದ್ದಲ್ಲಿ  ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Conclusion:ದಂಡ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.