ETV Bharat / state

ದೇಶದ ಅತ್ಯುತ್ತಮ ಮೃಗಾಲಯಗಳಲ್ಲಿ ಮೈಸೂರು ಮೃಗಾಲಯಕ್ಕೆ ಮೂರನೇ ಸ್ಥಾನ - ಡಾರ್ಜಿಲಿಂಗ್ ಮೃಗಾಲಯ

ಅತ್ಯುತ್ತಮ ಮೃಗಾಲಯ ಕೆಟಗರಿಯಲ್ಲಿ ಮೈಸೂರು ಮೃಗಾಲಯವು ಅತ್ಯುತ್ತಮ ನಿರ್ವಹಣೆಯಲ್ಲಿ ಮೊದಲ ಸ್ಥಾನವನ್ನು ಡಾರ್ಜಿಲಿಂಗ್ ಮೃಗಾಲಯ, ಎರಡನೇ ಸ್ಥಾನವನ್ನು ಚೆನ್ನೈ ಮೃಗಾಲಯ ಪಡೆದುಕೊಂಡಿದೆ.

Mysore Zoo ranked third among best zoos in country
ಮೈಸೂರು ಮೃಗಾಲಯಕ್ಕೆ ಮೂರನೇ ಸ್ಥಾನ
author img

By

Published : Sep 16, 2022, 5:36 PM IST

ಮೈಸೂರು: ದೇಶದ ಅತ್ಯುತ್ತಮ ಮೃಗಾಲಯಗಳಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯವು, ಮೃಗಾಲಯ ನಿರ್ವಹಣಾ ಕೆಟಗರಿಯಲ್ಲಿ ಮೂರನೇ ಸ್ಥಾನ ಮತ್ತು ವಿಸ್ತರಣೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನೀಡುವ ದೇಶದ ಅತ್ಯುತ್ತಮ ಮೃಗಾಲಯ ಕೆಟಗರಿಯಲ್ಲಿ ಮೈಸೂರು ಮೃಗಾಲಯವು ಅತ್ಯುತ್ತಮ ನಿರ್ವಹಣೆಯಲ್ಲಿ ಮೂರನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನವನ್ನು ಡಾರ್ಜಿಲಿಂಗ್ ಮೃಗಾಲಯ, ಎರಡನೇ ಸ್ಥಾನವನ್ನು ಚೆನ್ನೈ ಮೃಗಾಲಯ ಪಡೆದುಕೊಂಡಿದೆ. ಇದರ ಜೊತೆಗೆ ಸಂಯೋಜನೆ ಮತ್ತು ಸಂಸ್ಕರಣಾ ಘಟಕದ ವೈಜ್ಞಾನಿಕ ತಳಹದಿಯ ಮೇಲೆ ನಿರ್ವಹಣೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.

ಮೈಸೂರು ಮೃಗಾಲಯಕ್ಕೆ ಮೂರನೇ ಸ್ಥಾನ

ಈ ದಿಸೆಯಲ್ಲಿ ನಾವು ಕೆಲಸ ನಿರ್ವಹಿಸುತ್ತಿದ್ದೇವೆ ಎಂದ ಅಜಿತ್ ಕುಲಕರ್ಣಿ, ಮೈಸೂರು ಮೃಗಾಲಯದಲ್ಲಿ 149 ಪ್ರಜಾತಿ ಪ್ರಾಣಿ ಪಕ್ಷಿಗಳನ್ನು ಹೊಂದಿದ್ದು, ಅದರಲ್ಲಿ 1450 ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳು ಇವೆ. 157 ಎಕರೆ ಪ್ರದೇಶದಲ್ಲಿ ಮೃಗಾಲಯವಿದ್ದು, ಇದರಲ್ಲಿ ಕಾರಂಜಿ ಕೆರೆ ಸೇರಿದೆ. ಅದನ್ನು ಹೊರತುಪಡಿಸಿ ಚಾಮರಾಜೇಂದ್ರ ಮೃಗಾಲಯ 80 ಎಕರೆ ವಿಸ್ತೀರ್ಣ ಹೊಂದಿದ್ದು, ಅತೀ ದೊಡ್ಡ ಮೃಗಾಲಯ ಚೆನ್ನೈ ಆಗಿದ್ದು, ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ.

ಇದರ ಜೊತೆಗೆ ಮೈಸೂರು ಹೊರ ಹೊಲಯದ ಕೂರ್ಗಳ್ಳಿಯಲ್ಲಿ 50 ಎಕರೆ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಿದ್ದು, ಅಲ್ಲಿ ಪ್ರಾಣಿಗಳ ಸಂರಕ್ಷಣೆ ಹಾಗೂ ಚಿಕಿತ್ಸಾ ಕೇಂದ್ರವಾಗಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು.. ದೇಶದಲ್ಲೀಗ 64 ತಾಣಗಳಿಗೆ ಅಂತಾರಾಷ್ಟ್ರೀಯ ಮನ್ನಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.