ಮೈಸೂರು: ಶಿಕ್ಷಣ ಇಲಾಖೆಯಿಂದ ಹಾಸನದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಆಯಿಷತ್ ಹಿಬಾ, ನಿರೀಕ್ಷಾ ಹೆಚ್. ಶೆಟ್ಟಿ, ವೈಗಾ ಎಂ ಅವರು ರಾಜ್ಯ ಮಟ್ಟದಲ್ಲಿ ಆಡಲಿದ್ದಾರೆ. ಹನ್ ನಫೀಸ್, ಫಾತಿಮತ್ ಅಲ್ ಶಿಫಾ, ನದ್ ಆಯಿಷಾ, ಶಾನ್ವಿ ಪ್ರೀಷ್ಮ ಮೊಂತೆರೊ, ಪೂರ್ವಿಕಾ, ಸಿಂಚನಾ ಇತರರು ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಶಾಲಾ ದೈಹಿಕ ಶಿಕ್ಷಕ ನಿರಂಜನ್ ಹಾಗೂ ಅಕ್ಷಯ್ ಅವರು ಮಕ್ಕಳಿಗೆ ತರಬೇತಿ ನೀಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಸೆಲಿನ್ ಪೇತ್ರಾ ಮಕ್ಕಳಿಗೆ ಶುಭ ಹಾರೈಸಿದರು.
ಇತ್ತೀಚೆಗೆ ನಡೆದಿದ್ದ ವಿಕಲಚೇತನರ ಸಿಟ್ಟಿಂಗ್ ಥ್ರೋಬಾಲ್: ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಇತ್ತೀಚೆಗೆ ನಡೆದ ವಿಕಲಚೇತನರ ಸಿಟ್ಟಿಂಗ್ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಹಾಗೂ ಪುರುಷ ತಂಡಗಳು ಗೆಲ್ಲುವ ಮೂಲಕ ಚಿನ್ನದ ಪದಕ ಗಳಿಸಿದ್ದವು. ಈ ಇಬ್ಬರು ಆಟಗಾರರು ಹಾವೇರಿ ಜಿಲ್ಲೆಯವರಾಗಿದ್ದು, ಮಹಿಳಾ ತಂಡವನ್ನು ಬನ್ನಿಹಟ್ಟಿ ತಾಂಡಾದ ಮಂಜುಳಾ ಲಮಾಣಿ ಮತ್ತು ಪುರುಷ ತಂಡವನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹರೀಶ್ ಶಿವಣ್ಣನವರ್ ಮುನ್ನಡಿಸಿದ್ದರು.
ಸಿಟ್ಟಿಂಗ್ ಥ್ರೋಬಾಲ್ ಕ್ರೀಡೆಯನ್ನು ಪರಿಚಯಿಸಲು ಮಲೇಷ್ಯಾ ವಿಕಲಚೇತನರ ವಾಲಿಬಾಲ್ ಅಸೋಸಿಯೇಷನ್ ಹಾಗೂ ಪ್ಯಾರಾ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಈ ಪಂದ್ಯಗಳನ್ನು ಏರ್ಪಡಿಸಿದ್ದರು. ಮಲೇಷ್ಯಾ ಮತ್ತು ಭಾರತ ಪ್ಯಾರಾ ತ್ರೋಬಾಲ್ ತರಬೇತಿ ಕಾರ್ಯಾಗಾರ, ಎರಡು ದೇಶಗಳ ನಡುವೆ ಸಿಟ್ಟಿಂಗ್ ಥ್ರೋಬಾಲ್ ಸರಣಿಯ ಐದು ಪಂದ್ಯಗಳನ್ನು ನಡೆದಿದ್ದವು. ಈ ಪಂದ್ಯಗಳಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಭಾರತದ ಆಟಗಾರರು ಪದಕಗಳನ್ನು ಗಳಿಸಿದ್ದರು. ಜೊತೆಗೆ ಮಲೇಷಿಯನ್ ಸಿಟ್ಟಿಂಗ್ ವಾಲಿಬಾಲ್ ಆಟಗಾರರು ಭಾಗವಹಿಸಿದ್ದರು.
ಇದನ್ನೂ ಓದಿ: ಬಲಿಷ್ಠ ಬ್ಯಾಟಿಂಗ್ ದಕ್ಷಿಣ ಆಫ್ರಿಕಾದ ಗೆಲುವಿನ ಸೂತ್ರ ಆಗಲಿದೆ: ರಾಹುಲ್ ದ್ರಾವಿಡ್