ಹೆಚ್ಡಿಕೆ ಸರ್ಕಾರ ಕೆಡವಿದ್ದು ನಾನಲ್ಲ, ಶಾಸಕರ ಸಮಸ್ಯೆಗಳನ್ನು ಅವರು ಕೇಳದೇ ಸರ್ಕಾರ ಬೀಳಿಸಿಕೊಂಡರು ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಕುಮಾರ್ ಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ - ಚಾಮುಂಡೇಶ್ವರಿ ಚುನಾವಣೆಯ ಸೋಲಿನ ಕುರಿತು ಸಿದ್ದರಾಮಯ್ಯ ಬೇಸರ
![ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ siddaramaiah](https://etvbharatimages.akamaized.net/etvbharat/prod-images/768-512-9923466-thumbnail-3x2-sanju.jpg?imwidth=3840)
21:17 December 18
ಹೆಚ್ಡಿಕೆ ಸರ್ಕಾರ ಕೆಡವಿದ್ದು ನಾನಲ್ಲ: ಹೌದು ಹುಲಿಯಾ!!
16:19 December 18
ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು:ಸಿದ್ದರಾಮಯ್ಯ
ಮೈಸೂರು: ಚಾಮುಂಡೇಶ್ವರಿ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ಚುನಾವಣೆಯ ಸೋಲಿನ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ
ಇಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮ ಜನಾಧಿಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು. ಬಿಜೆಪಿ ಅವರು ಗ್ರಾಮ ಪಂಚಾಯಿತಿಯಲ್ಲಿ ಸೋತಾ ಅಭ್ಯರ್ಥಿಯನ್ನು ನನ್ನ ವಿರುದ್ಧ ಎತ್ತಿಕಟ್ಟಿ ಜೆಡಿಎಸ್ ನೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಸೋಲಿಸಿದರು ಎಂದರು.
ಸಮ್ಮಿಶ್ರ ಸರ್ಕಾರ ಬೀಳಿಸಬೇಕು ಅಂದಿದ್ದರೆ ಕುಮಾರಸ್ವಾಮಿ ಸಿಎಂ ಆಗುವುದಕ್ಕೆ ಬಿಡುತ್ತಿರಲಿಲ್ಲ. ನಾನು ಕುಮಾರಸ್ವಾಮಿ ಬೇಡ ಅಂದಿದ್ದರೆ ಅವರು ಸಿಎಂ ಆಗುತ್ತಿರಲಿಲ್ಲ. ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಳಿತುಕೊಂಡು ಶಾಸಕರಿಗೆ ಸ್ಪಂದಿಸದೇ ಇದ್ದಿದ್ದರಿಂದ ಸರ್ಕಾರ ಬಿದ್ದು ಹೋಯಿತು, ಕುಣಿಯಲಾರದವರಿಗೆ ನೆಲ ಡೊಂಕು ಅನ್ನೊ ಹಾಗೆ ಕುಮಾರಸ್ವಾಮಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಓದಿ: ಹಾಲ್ಮಾರ್ಕ್ ಹೆಸರಲ್ಲಿ ವಂಚನೆ: ವಿದ್ಯಾನಗರ ಪೊಲೀಸರಿಂದ ಆರೋಪಿಯ ಬಂಧನ
ಚಾಮುಂಡೇಶ್ವರಿ ನನಗೆ ರಾಜಕೀಯ ಮರು ಜನ್ಮ ಕೊಟ್ಟ ಕ್ಷೇತ್ರ. ಆದರೆ, ರಾಜಕೀಯವಾಗಿ ವೇದನೆ ಕೊಟ್ಟ ಕ್ಷೇತ್ರವೂ ಹೌದು. ಇಷ್ಟೊಂದು ಅಂತರ ಮತಗಳಿಂದ ಚಾಮುಂಡೇಶ್ವರಿಯಲ್ಲಿ ಸೋಲುತ್ತೇನಿ ಅಂತಾ ನನಗೆ ಗೊತ್ತಿರಲಿಲ್ಲ. ಜನರಿಗೆ ಪ್ರೀತಿ ತೋರಿಸಿದರೂ ವೋಟ್ ಹಾಕಲಿಲ್ಲ. ನನ್ನ ಸೋಲಿಗೆ ಬಿಜೆಪಿ, ಜೆಡಿಎಸ್ ಹಾಗೂ ನಮ್ಮ ಕಾಂಗ್ರೆಸ್ ನವರೂ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷುಲಕ ಕಾರಣಕ್ಕಾಗಿ ಪಕ್ಷದ ವಿರುದ್ದ ಕೆಲಸ ಮಾಡಬಾರದು. ನಾಯಕತ್ವ ಇಷ್ಟ ಇಲ್ಲ ಅಂದ್ರೆ ಪಕ್ಷ ಬಿಟ್ಟು ಹೋಗಲಿ. ಹೋಗುವವರನ್ನ ಪಕ್ಷ ಇರೀ ಅಂತ ಹೇಳೋಲ್ಲ. ಯಾರೂ ಪಕ್ಷಕ್ಕೆ ಅನಿವಾರ್ಯ ಆಗೋಲ್ಲ. ವ್ಯಕ್ತಿಗೆ ಪಕ್ಷ ಅನಿವಾರ್ಯ ಹೊರತು ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ. ನನ್ನ ಸೋಲಿಗೆ ಅನೇಕ ಕಾರಣ ಇದೆ. ಅದನ್ನ ಈಗ ಹೇಳೋಲ್ಲ.ನಾವು ಪ್ರಚಾರ ಸರಿಯಾಗಿ ಮಾಡಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಿದ್ದು ನಮ್ಮ ಸರ್ಕಾರ ಮಾತ್ರ. ಹೀಗಾಗಿ ನನ್ನನ್ನ ಸೋಲಿಸೋಕೆ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡರು ಎಂದರು.
1931ರಲ್ಲೇ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ನನ್ನ ಅವಧಿಯಲ್ಲಿ 162ಕೋಟಿ ಖರ್ಚು ಮಾಡಿ ಜಾತಿವಾರು ಸಮೀಕ್ಷೆ ಮಾಡಿಸಿದ್ದೆ. ಆದರೆ ಅದನ್ನ ಆ ಮೇಲೆ ಕೊಡ್ತಿನಿ ಇನ್ನು ಸಮೀಕ್ಷೆ ಪೂರ್ಣ ಆಗಿಲ್ಲ ಅಂದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಬಳಿಕ ಅದನ್ನ ತೆಗೆದುಕೊಳ್ಳಬೇಡ ಎಂದ್ರು. ಆ ವೇಳೆ ಪುಟ್ಟರಂಗ ಶೆಟ್ಟಿ ಹಿಂದೂಳಿದ ವರ್ಗಗಳ ಸಚಿವ ಆಗಿದ್ರು. ಪುಟ್ಟರಂಗಶೆಟ್ಟಿಯನ್ನ ಬೆದರಿಸಿ ತಗೋಬೇಡ ಅದನ್ನ ಅಂದರು. ಅದು ಹೊರಗೆ ಬಂದ್ರೆ ಕೆಳಗಿರುವ ಜನರು ಮೇಲೆ ಬರ್ತಾರೆ. ಯಾವ ಯಾವ ವರ್ಗಕ್ಕೆ ಏನು ಕೆಲಸ ಆಗಿದೆ ಅಂತ ಗೊತ್ತಾಗ್ತಿತ್ತು. ಆದರೆ ಅದನ್ನ ಹೊರಗೆ ತರುವ ಕೆಲಸ ಬಿಜೆಪಿ, ಜೆಡಿಎಸ್ ಮಾಡಲಿಲ್ಲ. ಇದರಿಂದ ಬಡವರಿಗೆ ನಿಜವಾಗಿ ಅನುಕೂಲವಾಗುವಂತ ಸಮೀಕ್ಷೆ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಡಕಲು, ವಯಸ್ಸಾದ ಹಸುಗಳನ್ನ ರೈತರು ಏನು ಮಾಡಬೇಕು?. ಇದನ್ನ ಪ್ರಶ್ನಿಸಿದ್ರೆ ಅಶೋಕ ನಮ್ಮ ಮನೆಗೆ ಕಳಿಸಿ ಅಂತಾನೆ. ದುಡ್ಡು ಕೊಟ್ಟು ತಗೋಳಪ್ಪ ಅಂದ್ರೆ ಉಸಿರಿಲ್ಲ. ಗೋಮಾತೆ ಪೂಜೆ ಮಾಡುವ ನಾಯಕರು ಯಾವತ್ತಾದ್ರು ಸಗಣಿ ಎತ್ತಿದ್ದಾರಾ? ಮೇಯಿಸಿ, ಹುಲ್ಲು ಹಾಕಿ ಹಾಲು ಕರೆದು ಡೈರಿಗೆ ಹಾಕಿದ್ದಾರಾ? ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.
ನಾಳೆಯಿಂದಲೇ ಎಲ್ಲರೂ ಕ್ಯಾಂಪೇನ್ ಆರಂಭ ಮಾಡಿ: ಕಾರ್ಯಕರ್ತರಿಗೆ ಕರೆ
ಗ್ರಾ.ಪಂ ಚುನಾವಣೆ ಬಗ್ಗೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಬಿಜೆಪಿ ಸೋಲಿಸಬೇಕು ಅನ್ನೊದಾದ್ರೆ ಒಬ್ಬಬ್ಬರು ಮಾತ್ರ ಚುನಾವಣೆಗೆ ನಿಲ್ಲಿ. ನೀವೇ ಮೂರು ಮೂರು ಜನ ಚುನಾವಣೆಗೆ ನಿಲ್ಲಬೇಡಿ. ನಮ್ಮ ಕಾರ್ಯಕರ್ತರು ಈ ಬಗ್ಗೆ ಗಮನ ಹರಿಸಬೇಕು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಸೂಚಿಸಿದರು.