ಮೈಸೂರು: ಕೊರೊನಾಗೆ ತಾಲೂಕಿನಲ್ಲಿ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಹರ್ಷವರ್ಧನ್ ಗರಂ ಆಗಿದ್ದಾರೆ.
ನಂಜನಗೂಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಮ್ಯಾನ್ ಪವರ್ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೀಗೆ ಡೈರೆಕ್ಷನ್ ಕೊಡಬೇಡಿ ಎಂದು ಕಿವಿಮಾತು ಹೇಳಿದರು.
ಅಭಿರಾಮ್ ಜಿ. ಶಂಕರ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಇದಕ್ಕಿಂತಲೂ ಕೊರೊನಾ ಹೆಚ್ಚಾಗಿತ್ತು. ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದರು. ಅವರು ಹೇಗೆ ಆಡಳಿತ ನಡೆಸಿದ್ದರು ಎಂದು ಮಾಹಿತಿ ಪಡೆಯಿರಿ. ಅವರಿದ್ದಾಗ ಯಾವುದೇ ದೂರುಗಳು ಬರಲಿಲ್ಲ. ಯಾವ ಶಾಸಕರೂ ಚಕಾರ ಎತ್ತಲಿಲ್ಲ ಎಂದರು.
ತಾಲೂಕು ಮಟ್ಟದಲ್ಲೇ ಚಿಕಿತ್ಸೆ ನೀಡಬೇಕು ಅಂದರೆ ಎಲ್ಲಾ ರೀತಿಯ ಸೌಲಭ್ಯಗಳ ಅವಶ್ಯಕತೆ ಇರುತ್ತದೆ. ಇಂತಹ ನಿರ್ದೇಶನಗಳನ್ನ ನೀಡಬೇಡಿ ಎಂದು ಡಿಸಿ ರೋಹಿಣಿ ಸಿಂಧೂರಿಗೆ ಸಂದೇಶ ರವಾನಿಸಿದರು.