ಮೈಸೂರು: ಎಲೆ ತೋಟದ ಕಾಮಗಾರಿ ವೀಕ್ಷಣೆ ಮಾಡುವಾಗ ಸಚಿವ ಹಾಗೂ ಶಾಸಕರು ಆಯತಪ್ಪಿ ಬಿದ್ದ ಘಟನೆ ಇಂದು ನಗರದ ಎಲೆ ತೋಟದಲ್ಲಿ ನಡೆದಿದೆ.
ಇಂದು ಸಚಿವ ಜಿ.ಟಿ.ದೇವೇಗೌಡ ಅವರು ನಗರದ ಕೆ.ಆರ್. ಕ್ಷೇತ್ರದ ಎಲೆ ತೋಟದ ಬಳಿ ಇರುವ ಖಾಲಿ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಣೆ ಹಾಗೂ ಆ ಭಾಗದಲ್ಲಿ ಪಾರ್ಕಿಂಗ್ಗಾಗಿ ನಿರ್ಮಾಣ ಮಾಡಿರುವ ಬಿಲ್ಡಿಂಗ್ ವೀಕ್ಷಣೆ ಮಾಡಲು ಹೋಗಿದ್ದರು. ರಸ್ತೆಯಿಂದ ಎಲೆ ತೋಟದ ಜಾಗಕ್ಕೆ ತೆರಳಲು ಕೊಳಚೆ ನೀರು ಹರಿಯುವ ಮೋರಿ ಮೇಲೆ ಹಾಕಿರುವ ಅಡಿಕೆ ದಬ್ಬೆ ಮೇಲೆ ಸಚಿವ ಜಿ.ಟಿ.ದೇವೇಗೌಡ, ಬಿಜೆಪಿ ಶಾಸಕ ಎಲ್.ನಾಗೇಂದ್ರ ಹಾಗೂ ನಗರ ಪಾಲಿಕೆ ಸದಸ್ಯ ಎಸ್.ಬಿ.ಮಂಜು ನಡೆದುಕೊಂಡು ಹೋಗುವಾಗ ಆಯತಪ್ಪಿ ಕೆಳಗೆ ಬೀಳುವಾಗ ಬ್ಯಾಲೆನ್ಸ್ ಮಾಡಿ ಕೆಳಗೆ ಕುಳಿತುಕೊಂಡಿದ್ದಾರೆ.
ಆದ್ರೆ ಬ್ಯಾಲೆನ್ಸ್ ಮಾಡಲು ಆಗದೆ ನಾಗೇಂದ್ರ ಹಾಗೂ ಮಂಜು ಕೆಳಕ್ಕೆ ಜಾರಿಬಿದ್ದಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರ ಟವೆಲ್ ಕೊಳಚೆ ನೀರಿಗೆ ಬಿದ್ದಿದೆ.