ETV Bharat / state

ಮೇಕೆದಾಟು ಪಾದಯಾತ್ರೆಯಿಂದಲೇ ಕಾಂಗ್ರೆಸ್ ಸರ್ವನಾಶ: ಆರ್ ಅಶೋಕ್​​

author img

By

Published : Mar 3, 2022, 7:42 PM IST

ಉಕ್ರೇನ್​​​ನಲ್ಲಿ ನಮ್ಮ ವಿದ್ಯಾರ್ಥಿಗಳು ಒಂದು ತುತ್ತು ಅನ್ನ ಸಿಗದೆ ಸಂಕಷ್ಟದಲ್ಲಿರುವಾಗ, ಹೋಳಿಗೆ ಊಟ, ಪಾಯಸ, ಮಜ್ಜಿಗೆ, ಎಳನೀರು ಕುಡಿದುಕೊಂಡು ಪಾದಯಾತ್ರೆ ಮಾಡಿದ್ದಾರೆ. ಡೋಲು, ತಮಟೆ, ಹಾಡು, ಸಿದ್ದರಾಮಯ್ಯನವರ ಡ್ಯಾನ್ಸ್, ಇವೆಲ್ಲಾ ಬೇಕಿತ್ತಾ. ಇಂತಹ ನೋವಿನಲ್ಲೂ ದೊಂಬರಾಟ ಮಾಡುವುದು ಕಾಂಗ್ರೆಸ್​​ಗೆ ಬೇಕಿತ್ತಾ ಎಂದು ಆರ್ ಅಶೋಕ್​​ ಕಿಡಿಕಾರಿದರು.

ಆರ್ ಅಶೋಕ್​​
ಆರ್ ಅಶೋಕ್​​

ಮೈಸೂರು: ಉಕ್ರೇನ್​​ನಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ, ಶಿವಮೊಗ್ಗದಲ್ಲಿ ಹಿಂದೂ ಹುಡುಗನ ಹತ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಮಾಡಿಕೊಂಡು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪಾದಯಾತ್ರೆಯಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್​​​ ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಆರ್​​. ಅಶೋಕ್ ಅವರು​​ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ಅಭಿಯಾನ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಕ್ರೇನ್​​ನಲ್ಲಿ ನಮ್ಮ ಭಾರತದ ವಿದ್ಯಾರ್ಥಿಗಳು ಊಟ ತಿಂಡಿ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ನಮ್ಮ ರಾಜ್ಯದ ಓರ್ವ ವಿದ್ಯಾರ್ಥಿ ಉಕ್ರೇನ್​ನಲ್ಲಿ ಹತನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನವರು ಪಾದಯಾತ್ರೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್​​ ನಾಯಕರ ವಿರುದ್ಧ ಸಚಿವ ಆರ್ ಅಶೋಕ್​​​ ವಾಗ್ದಾಳಿ

ಉಕ್ರೇನ್​​​ನಲ್ಲಿ ನಮ್ಮ ವಿದ್ಯಾರ್ಥಿಗಳು ಒಂದು ತುತ್ತು ಅನ್ನ ಸೀಗದೆ ಸಂಕಷ್ಟದಲ್ಲಿರುವಾಗ, ಹೋಳಿಗೆ ಊಟ, ಪಾಯಸ, ಮಜ್ಜಿಗೆ, ಎಳನೀರು ಕುಡಿದು ಪಾದಯಾತ್ರೆ ಮಾಡಿದ್ದಾರೆ. ಡೋಲು, ತಮಟೆ, ಹಾಡು, ಸಿದ್ದರಾಮಯ್ಯನವರ ಡ್ಯಾನ್ಸ್, ಇವೆಲ್ಲಾ ಬೇಕಿತ್ತಾ. ಇಂತಹ ನೋವಿನಲ್ಲೂ ದೊಂಬರಾಟ ಮಾಡುವುದು ಕಾಂಗ್ರೆಸ್​​ಗೆ ಬೇಕಿತ್ತಾ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಮಾಡಿಕೊಂಡು ಪಾದಯಾತ್ರೆ ಮಾಡಿದ್ದಾರೆ, ಇದರಿಂದ ನ್ಯಾಯಾಧೀಶರು ಕೋರ್ಟ್ ಗೆ ಹೋಗಲು ಸಾಧ್ಯವಾಗಿಲ್ಲ. ಬೆಂಗಳೂರಿನ ಜನರು ಟ್ರಾಫಿಕ್ ಜಾಮ್ ನಿಂದ ಕಾಂಗ್ರೆಸ್ ಪಕ್ಷದವರಿಗೆ ಶಾಪ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್ ನವರು ಸರ್ವನಾಶವಾಗುತ್ತಾರೆ ಎಂದು ಕಾಂಗ್ರೆಸ್ ಪಾದಯಾತ್ರೆಯ ಬಗ್ಗೆ ಅಶೋಕ್​​​ ಭವಿಷ್ಯ ನುಡಿದರು.

ದೊಡ್ಡ ಮಟ್ಟದ ಮೆರವಣಿಗೆಗೆ ಕೋರ್ಟ್ ತಡೆ ನೀಡಬೇಕು ಎಂಬ ಆದೇಶವನ್ನು ಸರ್ಕಾರಕ್ಕೆ ನೀಡಿತ್ತು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸರ್ಕಾರ ಕಾಂಗ್ರೆಸ್ ವಿರುದ್ಧ ಕೇಸ್ ಹಾಕಿದ್ದರೂ, ಅವರು ನೀವು ನಮ್ಮ ಮೇಲೆ ಎಷ್ಟು ಕೇಸ್ ಹಾಕಿದರೂ ನಾವು ಕೇರ್ ಮಾಡುವುದಿಲ್ಲ ಎಂದು ಹೇಳುತ್ತಾರೆ. ಅವರು ದೇಶದ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಕಾನೂನು ಬೇಡ, ಚುನಾವಣೆಯಲ್ಲಿ ಗೆಲ್ಲಬೇಕು ಅಷ್ಟೇ. ಆದರೆ ಪಾದಯಾತ್ರೆ ಮೂಲಕ ಕಾಂಗ್ರೆಸ್ ನವರು ಜನರಿಗೆ ತೊಂದರೆ ಕೊಟ್ಟಿದ್ದಾರೆ ಇದರ ಮೂಲಕವೇ ಅವರು ಇನ್ನಷ್ಟು ಅವನತಿ ಕಾಣುತ್ತಾರೆ ಎಂದು ಗುಡುಗಿದರು.

ಉಕ್ರೇನ್​​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಮಾಡುತ್ತಿರುವ ಆಪರೇಷನ್ ಗಂಗಾ ಷೋಆಫ್ ಎಂಬ ಹೇಳಿಕೆಗೆ ತಿರುಗೇಟು ನೀಡಿ‌ದ ಸಚಿವರು, ಏನು ಮಾಡೋಕೆ ಆಗದೆ ಇರುವವರು ಮೈ ಪರಚಿಕೊಂಡ್ರು ಎನ್ನುವ ಸ್ಥಿತಿ ಕಾಂಗ್ರೆಸ್​​​ನದ್ದು. ಇಡೀ ದೇಶದಲ್ಲಿ ಕಾಂಗ್ರೆಸ್​​ಗೆ ಅಸ್ತಿತ್ವವಿಲ್ಲ. ಪ್ರಧಾನಿ ಮೋದಿ ಉಕ್ರೇನ್​​​ನಲ್ಲಿ ಸಿಲುಕಿರುವ ಕಡೆಯ ವಿದ್ಯಾರ್ಥಿಯನ್ನು ಭಾರತಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಕಂದಾಯ ಇಲಾಖೆಯ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ ಕಡೆಯಿಂದ ದೆಹಲಿಯಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಟಿಕೆಟ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಕಂದಾಯ ಇಲಾಖೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕಡಿತ ವಿಲೇವಾರಿ ಅಭಿಯಾನವನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದ್ದು, ಕಂದಾಯ ಸ್ಪಂದನ ಹೆಸರಿನಲ್ಲಿ ಮಾಡಲಾಗುತ್ತಿದೆ. ಯಾರೇ ಬಡವ, ರೈತ ಅರ್ಜಿ ಸಲ್ಲಿಸಿದರು ಅವರಿಗೆ ನ್ಯಾಯ ಸಿಗಬೇಕು. ಈ ಅಭಿಯಾನದ ಮೂಲಕ ಕಳೆದ 15-20 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಹಾಗೂ ಎಸಿ ಕಚೇರಿಗಳಲ್ಲಿ ವರ್ಷಾನುಗಟ್ಟಲೆಯಿಂದ ಇರುವ ಕಡತಗಳಿಗೆ ಮುಕ್ತಿಯನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ಸಚಿವ ಅಶೋಕ್​ ತಿಳಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.