ETV Bharat / state

ಮೇ 25ರಂದು ನಂಜನಗೂಡು ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಸಾಮೂಹಿಕ ಸರಳ ವಿವಾಹ - ನಂಜನಗೂಡಲ್ಲಿ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹವನ್ನು ಮೇ 25ರ ಬುಧವಾರ ಬೆಳಗ್ಗೆ 10. 55 ರಿಂದ 11:40 ರವರೆಗೆ ಕಟಕ ಶುಭ ಲಗ್ನದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ವಧು- ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿ ಮಾಡುತ್ತದೆ.

ಮೇ 25 ರಂದು ನಂಜನಗೂಡು ಶೀಕಂಠೇಶ್ವರ ಸನ್ನಿಧಿಯಲ್ಲಿ ಸಾಮೂಹಿಕ ಸರಳ ವಿವಾಹ

author img

By

Published : May 6, 2022, 8:41 AM IST

ಮೈಸೂರು: ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಆಯೋಜಿಸಿರುವ ಸಪ್ತಪದಿ ಉಚಿತ ಸಾಮೂಹಿಕ ಸರಳ ವಿವಾಹವನ್ನು 2022 ರ ಮೇ 25 ರಂದು ನಂಜನಗೂಡಿನ ಶ್ರಿಕಂಠೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ತಿಳಿಸಿದ್ದಾರೆ.

ಸಾಮೂಹಿಕ ವಿವಾಹವನ್ನು ಮೇ 25 ರ ಬುಧವಾರ ಬೆಳಗ್ಗೆ 10. 55 ರಿಂದ 11:40 ರವರೆಗೆ ಕಟಕ ಶುಭ ಲಗ್ನ ದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದು, ವಧು- ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ದೇವಾಲಯ ಆಡಳಿತ ಮಂಡಳಿ ಮಾಡುತ್ತದೆ. ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರು 2022ರ ಮೇ 13 ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ನಾದಿನಿ ಜೊತೆ ಸಂಬಂಧ, ಸುತ್ತಾಟ.. ಬರ್ತ್​ಡೇ ಆಚರಣೆ ಫೋಟೊ ಶೇರ್​ ಮಾಡಿದ ಪತ್ನಿಯನ್ನೇ ಕೊಂದ ಪತಿ

55 ಸಾವಿರ ರೂ. ಪ್ರೋತ್ಸಾಹ ಧನ: ಸಪ್ತಪದಿ ಯೋಜನೆಯಡಿ ವಿವಾಹವಾಗುವ ವಧು-ವರರಿಗೆ ಸರ್ಕಾರ ಒಟ್ಟು 55 ಸಾವಿರ ರೂ.ಗಳ ಪ್ರೋತ್ಸಾಹಧನ, ವಧು-ವರರು ಪಂಚೆ, ಶರ್ಟ್‌, ಶಲ್ಯ, ಹೂವಿನ ಹಾರ, ಸೀರೆ ಹಾಗೂ ರವಿಕೆ ಖರೀದಿಸಲು ಅನುದಾನ ನೀಡುತ್ತಿದೆ. ವರನಿಗೆ ಹೂವಿನ ಹಾರ, ಪಂಚೆ, ಶರ್ಟ್‌, ಶಲ್ಯ ಖರೀದಿಗೆ 5 ಸಾವಿರ ರೂ, ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆಗಾಗಿ 10 ಸಾವಿರ ರೂ ನೀಡಲಿದೆ. ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಸೇರಿ ಒಟ್ಟು ಅಂದಾಜು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ನೀಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.