ETV Bharat / state

ಟಿಪ್ಪು ಜಯಂತಿ ಮಾತ್ರವೇಕೆ ಎಲ್ಲ ಜಯಂತಿ ರದ್ದಾಗಲಿ : ಕೆ.ಎಸ್.ಭಗವಾನ್ - ಕೆ.ಎಸ್​ ಭಗವಾನ್​ ವಿವಾದಾತ್ಮಕ ಹೇಳಿಕೆ

ಟಿಪ್ಪು ಜಯಂತಿ ಆಚರಣೆ ರದ್ದಿನ ಆದೇಶ ಹಿಂಪಡೆಯುವಂತೆ ಕೆ.ಎಸ್.​ ಭಗವಾನ್​ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕೆ.ಎಸ್​ ಭಗವಾನ್
author img

By

Published : Aug 3, 2019, 7:47 PM IST

ಮೈಸೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದರೆ ಸಾಲದು, ಎಲ್ಲ ಜಯಂತಿಯನ್ನು ರದ್ದು ಮಾಡಿ ತೋರಿಸಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಸವಾಲು ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಭಗವಾನ್

ಟಿಪ್ಪು ಜಯಂತಿಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಒಬ್ಬ ಅಪ್ರತಿಮ‌ ವೀರ ಆತನ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಟಿಪ್ಪು ಜಯಂತಿ ರದ್ದು ಮಾಡುವುದಾದರೆ ಎಲ್ಲಾ ಜಯಂತಿ ರದ್ದು ಮಾಡಲಿ ಎಂದು ಆಗ್ರಹಿಸಿದ್ದಾರೆ.

ಪೇಜಾವರ ಶ್ರೀ ಅವರು ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಮಾಡುವುದು ಬೇಡ, ಬೇಕಾದರೆ ಆ ಜನಾಂಗವೇ ಮಾಡಲಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಭಗವಾನ್, ಶಂಕರಾಚಾರ್ಯ ಜಯಂತಿ ಮಾಡಿದಾಗ ಪೇಜಾವರ ಶ್ರೀ ಯಾಕೆ ಮಾತನಾಡಲಿಲ್ಲ. ಶಂಕರಾಚಾರ್ಯರು ವೇದ, ಶಾಸ್ತ್ರಗಳನ್ನು ಶೂದ್ರರು ಓದಿದರೆ, ಅವರ ನಾಲೆಗೆ ಕತ್ತರಿಸಿ ಅಂತಾರೆ. ಅವರ ಜಯಂತಿ ಮಾಡ್ತಿರಾ, ಆದರೆ ಟಿಪ್ಪು ಯಾರಿಗಾದರೂ ತಲೆ ಕಡಿಯಿರಿ ಅಂತಾ ಹೇಳಿದ್ದಾರಾ ಎಂದು ಪ್ರಶ್ನಿಸಿದರು.

ಹಿಂದೂ ಧರ್ಮವೆಂಬುದು ದೇಶದಲ್ಲಿ ಇಲ್ಲ. ಅದನ್ನು ಬ್ರಾಹ್ಮಣರು ಸೃಷ್ಟಿ ಮಾಡಿದ ಧರ್ಮವೆಂದ ಕೆ.ಎಸ್​ ಭಗವಾನ್​ ಪೇಜಾವರ ಶ್ರೀಗಳ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಟಿಪ್ಪು ನಾಲ್ಕನೇ ಆಂಗ್ಲೋ-ಇಂಡಿಯನ್ ಯುದ್ಧದಲ್ಲಿ ಮಡಿಯದೇ ಇದ್ದರೆ, ಕಾವೇರಿ ವಿವಾದ ಇಷ್ಟೊಂದು ಮಟ್ಟಕ್ಕೆ ಆಗುತ್ತಿರಲಿಲ್ಲ. ಆದರೀಗ ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಈಗ ನ್ಯಾಯ ಕೊಡಿಸುವ ಶೂರಾಧಿಶೂರರು ಇಲ್ಲವೆಂದು ಕುಟುಕಿದರು.

Intro:ಕೆ‌.ಎಸ್.ಭಗವಾನ್

Body:ಕೆ.ಎಸ್‌.ಭಗವಾನ್

Conclusion:ಎಲ್ಲ ಜಯಂತಿ ರದ್ದು ಮಾಡಲಿ: ಕೆ.ಎಸ್.ಭಗವಾನ್
ಮೈಸೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡಿದರೆ ಸಾಲದು , ಎಲ್ಲ ಜಯಂತಿ ರದ್ದು ಮಾಡಿ ತೋರಿಸಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಸವಾಲು ಹಾಕಿದ್ದಾರೆ.
ಟಿಪ್ಪು ಜಯಂತಿಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರ ನಡೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಒಬ್ಬ ಅಪ್ರತಿಮ‌ ವೀರ ಆತನ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.ಎಲ್ಲ ಜಯಂತಿ ರದ್ದು ಮಾಡಲಿ ಎಂದು ಆಗ್ರಹಿಸಿದರು.
ಪೇಜಾವರ ಶ್ರೀ ಅವರು ಟಿಪ್ಪು ಜಯಂತಿ ಸರ್ಕಾರದಿಂದ ಮಾಡುವುದು ಬೇಡ, ಬೇಕಾದರೆ ಆ ಜನಾಂಗವೇ ಮಾಡಲಿ ಎಂಬ ಹೇಳಿಕೆ, ಪ್ರತಿಕ್ರಿಯೆ ನೀಡಿದ ಭಗವಾನ್, ಶಂಕರಾಚಾರ್ಯ ಜಯಂತಿ ಮಾಡಿದಾಗ ಪೇಜಾವರ ಶ್ರೀ ಯಾಕೆ ಮಾತನಾಡಲಿಲ್ಲ.ಶಂಕರಾಚಾರ್ಯರು ವೇದ, ಶಾಸ್ತ್ರಗಳನ್ನು ಶೂದ್ರರು ಓದಿದರೆ,ಅವರ ನಾಲೆಗೆ ಕತ್ತರಿಸಿ ಅಂತಾರೆ.ಅವರ ಜಯಂತಿ ಮಾಡ್ತಿರಾ, ಆದರೆ ಟಿಪ್ಪು ಯಾರಿಗಾದರೂ ತಲೆ ಕಡಿಯಿರಿ ಅಂತಾ ಹೇಳಿದ್ದಾರಾ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮವೆಂಬುದು ದೇಶದಲ್ಲಿ ಇಲ್ಲ.ಅದನ್ನು ಬ್ರಾಹ್ಮಣರು ಸೃಷ್ಟಿ ಮಾಡಿದ ಧರ್ಮವೆಂದು ಪೇಜಾವರ ಶ್ರೀಗಳಿಗೆ ತಿರುಗೇಟು ನೀಡಿದರು.
ಟಿಪ್ಪು ನಾಲ್ಕನೇ ಆಂಗ್ಲೋ-ಇಂಡಿಯನ್ ಯುದ್ಧದಲ್ಲಿ ಮಡಿಯದೇ ಇದ್ದರೆ, ಕಾವೇರಿ ವಿವಾದ ಇಷ್ಟೊಂದು ಮಟ್ಟಕ್ಕೆ ಆಗುತ್ತಿರಿಲ್ಲ.ಆದರೀಗ ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ.ಈಗ ನ್ಯಾಯ ಕೊಡಿಸುವ ಶೂರಾಧಿಶೂರರು ಇಲ್ಲವೆಂದು ಕುಟುಕಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.