ETV Bharat / state

ಕೆಆರ್​ಎಸ್​ ಹೊರಹರಿವು ಹೆಚ್ಚಳ: ಹೆಮ್ಮಿಗೆ ಸೇತುವೆ ಮುಳುಗಡೆ ಸಾಧ್ಯತೆ

author img

By

Published : Aug 10, 2020, 1:21 PM IST

ಕೆಆರ್​ಎಸ್​ನ ಹೊರಹರಿವಿನ ಪ್ರಮಾಣ ಹೆಚ್ಚಾಗಿದ್ದು, ನರಸೀಪುರದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಲು ಒಂದು ಅಡಿ ಮಾತ್ರ ಬಾಕಿ ಇದೆ.

Increase in KRS Outflow: Hemmige Bridge to sink
ಕೆಆರ್​ಎಸ್​ ಹೊರಹರಿವಿನಲ್ಲಿ ಹೆಚ್ಚಳ: ಹೆಮ್ಮಿಗೆ ಸೇತುವೆ ಮುಳುಗುವ ಸಾಧ್ಯತೆ

ಮೈಸೂರು: ಕೆಆರ್​ಎಸ್​ನ ಹೊರಹರಿವಿನ ಪ್ರಮಾಣ ಹೆಚ್ಚಾಗಿದ್ದು, ನರಸೀಪುರದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಲು ಒಂದು ಅಡಿ ಮಾತ್ರ ಬಾಕಿ ಇದೆ.

ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್​ಎಸ್ ಜಲಾಶಯದಿಂದ ಹೆಚ್ಚಿನ ನೀರು ಹೊರಕ್ಕೆ ಬಿಡಲಾಗುತ್ತಿದೆ. ಹೀಗೆ ಹೊರಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ತಿ.ನರಸೀಪುರದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಲು ಇನ್ನೇನು ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ. ಇತ್ತ ಕಾವೇರಿ ಮತ್ತು ಕಬಿನಿ ಜಲಾಶಯದ ನೀರು ಸೇರಿಕೊಂಡು ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

ತಾಲೂಕಿನ ಮಾಲಂಗಿ ಗ್ರಾಮದ ಅಲಮೇಲಮ್ಮ ದೇವಸ್ಥಾನ ಹಾಗೂ ಧರ್ಮಚಕ್ರ ಕೂಡ ನೀರಿನಿಂದ ಮುಳುಗಿದೆ. ಒಂದು ವೇಳೆ ನರಸೀಪುರ ಮತ್ತು ತಲಕಾಡು ಗ್ರಾಮಕ್ಕೆ ರಸ್ತೆ ಕಲ್ಪಿಸುವ ಹೆಮ್ಮಿಗೆ ಸೇತುವೆ ನೀರಿನಿಂದ ಮುಳುಗಡೆಯಾದರೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.