ಮೈಸೂರು: ಸೆ. 26 ರಂದು ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ದಸರಾ ಉದ್ಘಾಟನೆಗೆ ಶಕ್ತಿ ದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಸಿದ್ಧವಾಗಿದ್ದು, ಈ ಬಗ್ಗೆ ವಿಶೇಷ ವಿಡಿಯೋ ಸಂದರ್ಶನ ಇಲ್ಲಿದೆ.
ನವರಾತ್ರಿಯ ಮೊದಲ ದಿನ ನಾಡದೇವತೆ ನೆಲೆಸಿರುವ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಬೆಳ್ಳಿಯ ರಥದಲ್ಲಿ ಕೂರಿಸಿ, ಬೆಳಗ್ಗೆ 9.45 ರಿಂದ 10.05 ರ ವರೆಗಿನ ಶುಭ ವೃಶ್ಚಿಕ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ನಾಡದೇವತೆಗೆ ಪೂಜೆ ಸಲ್ಲಿಸುತ್ತಾರೆ.
9 ದಿನ ವಿಶಿಷ್ಟ ಅಲಂಕಾರ: ಚಾಮುಂಡಿ ಬೆಟ್ಟದಲ್ಲಿ ನವರಾತ್ರಿಯ 9 ದಿನ ಚಾಮುಂಡೇಶ್ವರಿ ಮೂಲ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಅದರ ವಿವರ ಹೀಗಿದೆ.
ಸೆ.26ರ ಸೋಮವಾರ ನವರಾತ್ರಿಯ ಮೊದಲ ದಿನ ಚಾಮುಂಡೇಶ್ವರಿಗೆ ಭ್ರಾಹ್ಮಿ ಅಲಂಕಾರ.
ಸೆ.27 ರ ಮಂಗಳವಾರ ತಾಯಿಗೆ ಮಹೇಶ್ವರಿ ಅಲಂಕಾರ
ಸೆ.28 ರ ಬುಧವಾರ ಕೌಮಾರಿ ಅಲಂಕಾರ
ಸೆ.29 ರ ಗುರುವಾರ ವೈಷ್ಣವಿ ಅಲಂಕಾರ
ಸೆ.30 ರ ಶುಕ್ರವಾರ ವಾರಾಹಿ ಅಲಂಕಾರ
ಅ.01 ರ ಶನಿವಾರ ಇಂದ್ರಾಣಿ ಅಲಂಕಾರ
ಅ.02 ರ ಭಾನುವಾರ ಸರಸ್ವತಿ ಅಲಂಕಾರ (ಸಂಜೆ ಕಾಳರಾತ್ರಿ ಅಲಂಕಾರ)
ಅ.03 ರ ಸೋಮವಾರ ದುರ್ಗಾ ಅಲಂಕಾರ
ಅ.04 ರ ಮಂಗಳವಾರ ಆಯುಧಪೂಜೆ ವಿಶೇಷ ಮಹಾಲಕ್ಷ್ಮೀ ಅಲಂಕಾರ
ಅ.95 ರ ಬುಧವಾರ ವಿಜಯದಶಮಿ ದಿನದಂದು ಅಶ್ವಾರೋಹಣ ಅಲಂಕಾರ ಇರುತ್ತದೆ.
ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ಉದ್ಘಾಟನೆ ದಿನ ಪುಷ್ಪಾರ್ಚನೆ ಮಾಡಿ ನಂತರ 9 ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ 10ನೇ ದಿನ ಅರಮನೆಗೆ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಸಲ್ಲಿಸಿ, ಚಿನ್ನದ ಅಂಬಾರಿ ಮೇಲೆರಿಸಿ ಜಂಬೂಸವಾರಿಯ ದಿನ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ನವರಾತ್ರಿಯಲ್ಲಿ ಶಕ್ತಿದೇವತೆ ಪೂಜೆ ಏಕೆ ಮಾಡುತ್ತಾರೆ: ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರ ವಿಶೇಷ ಸಂದರ್ಶನ