ಮೈಸೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ, ಜನರು ಸಂಕಷ್ಟದಲ್ಲಿದ್ದಾರೆ. ಇದನ್ನು ಅರಿತು ಬಿಜೆಪಿ ಹೈಕಮಾಂಡ್ ಕೂಡಲೇ ರಾಜ್ಯಕ್ಕೆ ಪ್ರಾಮಾಣಿಕ ಹಾಗೂ ದಕ್ಷ ಮುಖ್ಯಮಂತ್ರಿಯನ್ನು ನೇಮಕ ಮಾಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿರುವುದು ನೋವಿನ ಸಂಗತಿ. ಆದ್ರೆ ಎಲ್ಲವೂ ಪಕ್ಷದ ತೀರ್ಮಾನವಾಗಿದೆ. 5 ವರ್ಷ ಸಿಎಂ ಆಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಎಲ್ಲಾ ವಿಚಾರವನ್ನು ತಿಳಿಸಿ ರಾಜೀನಾಮೆ ನೀಡಿದ್ದಾರೆ. ಇದರಿಂದ ಎಲ್ಲರ ಮನಸ್ಸಿಗೂ ನೋವಾಗಿದೆ ಎಂದರು.
ಪ್ರವಾಹದಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಜನರು ನರಳುತ್ತಿದ್ದಾರೆ. ಸಮಸ್ಯೆಗಳು ಹೆಚ್ಚಿವೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಕೂಡಲೇ ರಾಜ್ಯಕ್ಕೆ ದಕ್ಷ, ಪ್ರಾಮಾಣಿಕ ಮುಖ್ಯಮಂತ್ರಿಯನ್ನು ನೇಮಕ ಮಾಡಿ ಮತ್ತು ಮಂತ್ರಿಮಂಡಲ ರಚನೆ ಮಾಡಿ, ಜನರ ಸಂಕಷ್ಟಕ್ಕೆ ಸಹಕರಿಸಬೇಕಾಗಿದೆ ಎಂದು ಆಗ್ರಹಿಸಿದರು.
ಓದಿ: ಮಳೆ ಅಬ್ಬರದಿಂದ ಬೆಳೆಹಾನಿ: ಕೇಂದ್ರದಿಂದ ರಾಜ್ಯಕ್ಕೆ 629.03 ಕೋಟಿ ರೂ. ಪರಿಹಾರ ಘೋಷಣೆ