ಮೈಸೂರು: ಆಸ್ತಿ ವಿಚಾರದಲ್ಲಿ ಸಂಬಂಧಿಕರ ನಡುವೆ ಶುರುವಾದ ಗಲಾಟೆ ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹಿನಕಲ್ ಗ್ರಾಮದಲ್ಲಿ ನಡೆದಿದೆ.
ಹಿನಕಲ್‌ನ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ (50) ಕೊಲೆಯಾಗಿದ್ದಾರೆ. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಹೆಚ್ಚಿನ ವಿವರ:
ಆಸ್ತಿ ವಿಚಾರವಾಗಿ ಎರಡು ಕುಟುಂಬ ನಡುವೆ ಹಿನಕಲ್‌ನ ನಾಯಕರ ಬೀದಿಯಲ್ಲಿ ಗಲಾಟೆ ಜರುಗಿದೆ. ಈ ವೇಳೆ ಸಾಕಮ್ಮ ಎಂಬುವರಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮೀ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮೈಸೂರು : ಕರುಳ ಕುಡಿಯನ್ನೇ ಕೊಚ್ಚಿ ಸಾಯಿಸಿದ್ದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ
ಮತ್ತೊಬ್ಬ ಆರೋಪಿ ಮನೋಜ್ ಎಂಬಾತ ತಪ್ಪಿಸಿಕೊಂಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.