ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಆರೋಪದ ಜತೆ ರಾಜೀನಾಮೆ ನೀಡಿರುವುದಕ್ಕೆ ಜಿಲ್ಲಾಧಿಕಾರಿ ಡಿ ಸಿ ಸಿಂಧೂರಿ ಪ್ರತಿಕ್ರಿಯೆ ನೀಡಿದ್ದಾರೆ. ಶಿಲ್ಪಾನಾಗ್ ಅವರ ಆರೋಪ ಎಲ್ಲವೂ ಸುಳ್ಳು, ನನ್ನಿಂದ ಯಾವುದೇ ಕಿರುಕುಳ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಿಲ್ಪಾ ನಾಗ್ ಹೇಳಿಕೆಯಲ್ಲಿನ ಆರೋಪಗಳು ಸತ್ಯಕ್ಕೆ ದೂರವಾದವು. ಕೋವಿಡ್ ನಿಯಂತ್ರಿಸುವುದು ನನ್ನ ಕರ್ತವ್ಯ. ನನ್ನ ಎಲ್ಲಾ ಗಮನ ಮತ್ತು ಕಾರ್ಯಗಳು ಅ ಕಡೆಗೆ ಇದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಆರೋಪಕ್ಕೆ ಸಿಂಧೂರಿ ಪ್ರತ್ಯುತ್ತರ
ವಾಸ್ತವವಾಗಿ ಶ್ರೀಮತಿ ಶಿಲ್ಪಾ ನಾಗ್ ಕೋವಿಡ್ ಪರಿಶೀಲನಾ ವಿಮರ್ಶೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದರು. ಮೈಸೂರು ಸಿಟಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಕೋವಿಡ್ ಸಾವುಗಳು ಮತ್ತು ಸಕ್ರಿಯ ಪ್ರಕರಣಗಳ ಕುರಿತು ಸಹಿ ಮಾಡದ ಮತ್ತು ವಿರೋಧಾತ್ಮಕ ಅಂಕಿ-ಅಂಶಗಳನ್ನು ಸಲ್ಲಿಸುತ್ತಿದ್ದರು. ಅದನ್ನು ಸರಿಪಡಿಸಲು ನಾನು ಆದೇಶಿಸಿದ್ದೆ. ಈ ನಿಟ್ಟಿನಲ್ಲಿ ಹೊರಡಿಸಲಾದ ಪತ್ರದ ಪ್ರತಿಯನ್ನು ಇಲ್ಲಿ ಲಗತ್ತಿಸಿದ್ದೇನೆ.
ಮೈಸೂರು ನಗರದಲ್ಲಿ ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಆರೈಕೆ ಕೇಂದ್ರಗಳನ್ನು ತೆರೆಯುವಂತೆ ಆದೇಶಿಸಿದ್ದೆ (ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳು ಕಳೆದ 20 ದಿನಗಳಲ್ಲಿ 18 ಸಿಸಿಸಿ ತೆರೆಯಿತು). ಸನ್ನಿವೇಶಗಳಲ್ಲಿ ವೈಯಕ್ತಿಕವಾಗಿ ನಗರದಲ್ಲಿ ಇತ್ತೀಚಿಗೆ 3-ಸಿಸಿಸಿಗಳನ್ನು ತೆರೆಯಲಾಗಿದೆ. ಇವುಗಳನ್ನು ಉದ್ದೇಶಪೂರ್ವಕ ಕಿರುಕುಳವೆಂದು ಭಾವಿಸಲಾಗಿದೆ ಎಂದಿದ್ದಾರೆ.