ಮೈಸೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮೂರನೇ ದಿನದ ಪ್ರಚಾರಕ್ಕೆ ದರ್ಶನ್ ಅಣಿಯಾಗಿದ್ದಾರೆ.
ಇಂದು ಕೆ.ಆರ್. ಪೇಟೆ ತಾಲೂಕಿನ ತೆಂಡೆಕೆರೆ ಗ್ರಾಮದಿಂದ ಸುಮಲತಾ ಅಂಬರೀಶ್ ಜೊತೆ ಪ್ರಚಾರಕ್ಕೆ ಆಗಮಿಸುತ್ತಿರುವ ದರ್ಶನ್ ನೋಡಲು ಜನಸ್ತೋಮ ಕಾತುರದಿಂದ ಕಾಯುತ್ತಿದೆ.
ಜ್ಯೂಸ್ಗಾಗಿ ಮುಗಿಬಿದ್ದ ಜನ:
ಸುಮಲತಾ ಅಂಬರೀಶ್ ಪರವಾಗಿ ದರ್ಶನ್ ಪ್ರಚಾರಕ್ಕೆ ಆಗಮಿಸುವ ಮುನ್ನ ಬಾಯಾರಿದ ಜನರಿಗೆ ಜ್ಯೂಸ್ ನೀಡಲು ಗೂಡ್ಸ್ ಆಟೋದಲ್ಲಿ ಜ್ಯೂಸ್ ತರಲಾಗಿತ್ತು. ಆದರೆ, ಕೊಡುವ ಮುನ್ನವೇ ಆಟೋ ಏರಿದ ಸಾರ್ವಜನಿಕರು, ತಮ್ಮ ಕೈಗೆ ಸಿಕ್ಕ ಜ್ಯೂಸ್ ಬಾಟಲ್ಗಳನ್ನು ಎತ್ತಿಕೊಂಡರು. ಇನ್ನು ಆಯೋಜಕರು ಕೂಡ ಜ್ಯೂಸ್ ಬಾಟಲ್ಗಳನ್ನು ಸಾರ್ವಜನಿಕರ ಬಳಿ ಎಸೆದರು.