ETV Bharat / state

ಕೊರೊನಾ ಸೋಂಕಿಗೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಕೆರೆಗೆ ಹಾರಿದ ರೋಗಿ!

author img

By

Published : May 9, 2021, 3:37 PM IST

ಮೈಸೂರಿನ ತಿ. ನರಸೀಪುರ ರಸ್ತೆಯಲ್ಲಿರುವ ವರುಣಾ ಗ್ರಾಮದಲ್ಲಿನ ವ್ಯಕ್ತಿಯೋರ್ವರು ಕೊರೊನಾ ವೈರಸ್​ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

covid-patient-commits-suicide-in-mysore
ಕೊರೊನಾ ಸೋಂಕಿಗೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಮೈಸೂರು: ಕೊರೊನಾ ಸೋಂಕಿಗೆ ಹೆದರಿ ವ್ಯಕ್ತಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ. ನರಸೀಪುರ ರಸ್ತೆಯಲ್ಲಿರುವ ವರುಣಾ ಗ್ರಾಮದಲ್ಲಿ ನಡೆದಿದೆ.

ಸಿದ್ದಾರ್ಥ ಲೇಔಟ್​ನಲ್ಲಿ ವಾಸವಾಗಿದ್ದ ಶಿವನಂಜೇಗೌಡ (65) ಕೆರೆಗೆ ಹಾರಿದ ವ್ಯಕ್ತಿ. ಇವರು ಮೂಲತಃ ತಿ. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಗೊರವನಹಳ್ಳಿ ನಿವಾಸಿಯಾಗಿದ್ದು, 4 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಹೋಮ್ ಐಸೋಲೇಶನ್​ನಲ್ಲಿದ್ದರು. ನಂತರ ವೈರಸ್​ ಕುರಿತು ಭಯಭೀತರಾಗಿ ವರುಣಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

covid-patient-commits-suicide-in-mysore
ಕೊರೊನಾ ಸೋಂಕಿಗೆ ಹೆದರಿ ವ್ಯಕ್ತಿ ಆತ್ಮಹತ್ಯೆ

ವರುಣಾ ಪೊಲೀಸ್ ಠಾಣೆಯ ಪಿಎಸ್ಐ ಆರ್. ಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ವರುಣ ಕೆರೆಯ ಸುತ್ತಮುತ್ತ ಸುಳಿದಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಓದಿ: ಪಾರಂಪರಿಕ ಕಟ್ಟಡದಲ್ಲಿರುವ ಡಿಸಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ: ಸಿಂಧೂರಿ ವಿರುದ್ಧ ಮಲ್ಲೇಶ್ ಗಂಭೀರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.