ಮೈಸೂರು: ಮನುಷ್ಯ ಬದುಕಿದ್ದಾಗ ಹೇಗೆಲ್ಲಾ ಇರುತ್ತಾನೆ. ಆದರೆ ಅದೇ ಮನುಷ್ಯ ಕೋವಿಡ್ನಿಂದ ಸತ್ತರೆ ಅಂತಿಮ ದರ್ಶನಕ್ಕೂ ನಿರ್ಬಂಧ. ಇಂತಹ ನಿರ್ಬಂಧದ ನಡುವೆ ಯಾವ ರೀತಿ ಅಂತಿಮ ದರ್ಶನ ಇರುತ್ತದೆ ಎಂಬುದನ್ನು ಪ್ರತಿಯೊಬ್ಬರು ನೋಡಲೇಬೇಕಾದ ವಿಡಿಯೋ ಇದು.
ಕೋವಿಡ್ ಈಗ ವ್ಯಾಪಕವಾಗಿ ಹಳ್ಳಿ, ನಗರ, ಎಲ್ಲಾ ಭಾಗಗಳಲ್ಲೂ ಹರಡಿದೆ. ಇಂತಹ ಸಂದರ್ಭದಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲು ಸಂಬಂಧಿಕರು, ಹೆತ್ತವರೇ ದೂರ ಆಗುತ್ತಿದ್ದಾರೆ. ಕೋವಿಡ್ನಿಂದ ಮೃತಪಟ್ಟರೆ ಆ ವ್ಯಕ್ತಿಯನ್ನು ಮುಟ್ಟಲು ಅವಕಾಶವಿಲ್ಲ. ಇಂತಹ ಸ್ಥಿತಿಯಲ್ಲಿ ಅವರ ಅಂತಿಮ ದರ್ಶನ ಕಷ್ಟ ಸಾಧ್ಯ.
ಕೇವಲ ನಾಲ್ಕು ಜನ ಸಂಬಂಧಿಕರು ಪಿಪಿಇ ಕಿಟ್ ಧರಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ದೂರದಿಂದ ಶವವನ್ನು ನೋಡಿ ಹಾರ ಹಾಕಬೇಕಾಗಿದೆ. ಈ ರೀತಿ ಕೋವಿಡ್ನಿಂದ ಬರುವ ಸಾವು ಸಂಬಂಧಿಗಳಿಗೆ ಕೊಳ್ಳಿ ಇಟ್ಟಿದ್ದು, ಹೆತ್ತವರಿಗೆ ನೋವಿನ ಮೇಲೆ ನೋವು ಕೊಡುತ್ತಿದೆ.