ETV Bharat / state

ಮೈಸೂರು ಭೂ ಹಗರಣ: ಶಾಸಕ ರಾಮ್​​ದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್​​ ಸೂಚನೆ - ತ.ಮ ವಿಜಯಭಾಸ್ಕರ್

2008ರಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಭೂ ಹಗರಣ ಸಂಬಂಧ ಶಾಸಕ ಎಸ್​ ಎ ರಾಮ್​​ದಾಸ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಮತ್ತೆ ವಿಶೇಷ ಕೋರ್ಟ್​ ಶಾಸಕ ರಾಮ್​ದಾಸ್ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲಿಸಲು ಸೂಚಿಸಿದೆ.

ramdas
ಶಾಸಕ ರಾಮ್​​ದಾಸ್
author img

By

Published : Aug 8, 2021, 10:47 AM IST

ಮೈಸೂರು: ಮಳಲವಾಡಿ ಭೂ ಹಗರಣ ಸಂಬಂಧಿಸಿದಂತೆ ಶಾಸಕ ಎಸ್.ಎ ರಾಮ್​​ದಾಸ್​​​ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದೆ. ಸೆಕ್ಷನ್ 420, 468 ಅಡಿ ಕೇಸ್ ದಾಖಲಿಸಲು ಕೋರ್ಟ್ ಸೂಚನೆ ನೀಡಿದೆ. ಇದರಿಂದ ಶಾಸಕ ರಾಮದಾಸ್​​​ಗೆ ಸಂಕಷ್ಟ ಎದುರಾಗಿದೆ.

ಏನಿದು ಪ್ರಕರಣ..

2008ರಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಭೂ ಹಗರಣ ಸಂಬಂಧ ಶಾಸಕ ರಾಮ್​​ದಾಸ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಪೊಲೀಸರು ಬಿ ರಿಪೋಟ್೯ ಸಲ್ಲಿಸಿದ ವರದಿಯನ್ನ ಕೆಳ ನ್ಯಾಯಾಲಯ ಅಂಗೀಕರಿಸಿತ್ತು‌. ಕೆಳ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆಕ್ಷೇಪಣಾ ಅರ್ಜಿ ಸಲ್ಲಿಸಿದರು.

court-notice-to-file-criminal-case-against-mla-ramdas-in-land-scam-case
ಶಾಸಕ ರಾಮ್​​ದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್​​ ಸೂಚನೆ

ಅಷ್ಟರಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದ ರಾಮ್​​​​ದಾಸ್ ಅವರ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ವರ್ಗಾವಣೆಯಾಗಿತ್ತು. 2019ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ವಿಶೇಷ ಕೋರ್ಟ್ ಆದೇಶಿಸಿತ್ತು. ಆದರೆ, ವಿಶೇಷ ಕೋರ್ಟ್​ನ ಆದೇಶ ಪ್ರಶ್ನಿಸಿ ರಾಮ್​ದಾಸ್ ಹೈಕೋರ್ಟ್​​ನಿಂದ ತಡೆಯಾಜ್ಞೆ ತಂದಿದ್ದರು.

ಇತ್ತೀಚೆಗೆ ರಾಮ್​ದಾಸ್ ಅರ್ಜಿಯನ್ನು ವಜಾ ಮಾಡಿ, ಹೈಕೋರ್ಟ್​​ ತಡೆಯಾಜ್ಞೆಯನ್ನ ತೆರವು ಮಾಡಿದೆ. ಮತ್ತೆ ವಿಚಾರಣೆ ಮುಂದುವರಿಸಿದ ವಿಶೇಷ ಕೋರ್ಟ್​ ಶಾಸಕ ರಾಮ್​ದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದೆ.

1994ರಲ್ಲಿ ಅಂದಿನ‌ ಮೈಸೂರು ಡಿಸಿಯಾಗಿದ್ದ ತ.ಮ. ವಿಜಯಭಾಸ್ಕರ್ ಅವರು ಭೂಹಗರಣದ ಬಗ್ಗೆ ತನಿಖೆ ನಡೆಸಿ ರಾಮ್​ದಾಸ್ ವಿರುದ್ಧ ವರದಿ ಸಲ್ಲಿಸಿದ್ದರು.

ಓದಿ: ಬೆಂಗಳೂರಲ್ಲಿ ಕಾರು ಚಾಲಕನಿಂದ ಸರಣಿ ಅಪಘಾತ : ಇಬ್ಬರು ಬೈಕ್​ ಸವಾರರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.