ETV Bharat / state

ಕೊರೊನಾ ಎಫೆಕ್ಟ್: ನಂಜನಗೂಡಿನ ಶ್ರೀಕಂಠೇಶ್ವರನ ಆದಾಯದಲ್ಲಿ ಭಾರೀ ಇಳಿಕೆ - ಮೈಸೂರು ಸುದ್ದಿ

ಕೊರೊನಾದಿಂದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಕೇವಲ 66 ಲಕ್ಷ ರೂ. ಹುಂಡಿಯಲ್ಲಿ ಸಂಗ್ರಹವಾಗಿದೆ.

ನಂಜನಗೂಡಿನ ಶ್ರೀಕಂಠೇಶ್ವರನ ಆದಾಯದಲ್ಲಿ ಭಾರಿ ಇಳಿಕೆ

author img

By

Published : Sep 1, 2020, 12:54 PM IST

ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ನಂಜನಗೂಡು ದೇವಾಲಯದಲ್ಲಿ ನಿತ್ಯ ಸೇವೆಗಳು ಸ್ಥಗಿತವಾಗಿವೆ. ಇದರ ಪರಿಣಾಮವಾಗಿ ದೇವಾಲಯದ ಆದಾಯದಲ್ಲಿ 5 ಕೋಟಿಗೂ ಅಧಿಕ ನಷ್ಟವಾಗಿದೆ.

ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಲ್ಲಿ 28 ಹುಂಡಿಗಳಲ್ಲಿ ಕೇವಲ 66 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ. ಮಾರ್ಚ್ ನಂತರ ಮೊದಲ ಬಾರಿಗೆ ಎಲ್ಲಾ ಹುಂಡಿಗಳನ್ನು ಎಣಿಕೆ ಮಾಡಲಾಗಿದೆ. ಪ್ರತಿ ತಿಂಗಳು ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತಿತ್ತು. ಈ 6 ತಿಂಗಳಲ್ಲಿ 5 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ ತಿಳಿಸಿದ್ದಾರೆ.

ಇನ್ನು ಹುಂಡಿ ಎಣಿಕೆಯ ಸಂದರ್ಭದಲ್ಲಿ 2 ವರ್ಷಗಳ ಹಿಂದೆ ರದ್ದು ಮಾಡಲಾದ 1000 ಹಾಗೂ 500 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು. ಅದರಲ್ಲಿ 4 ನೋಟುಗಳು 1000 ಮುಖಬೆಲೆ, 15 ನೋಟುಗಳು 500 ಮುಖಬೆಲೆಯದ್ದಾಗಿವೆ. ಇದರ ಜೊತೆಗೆ ಹುಂಡಿಯಲ್ಲಿ 52 ಗ್ರಾಂ ಚಿನ್ನ, 2 ಕೆಜಿ 400 ಗ್ರಾಂ ಬೆಳ್ಳಿ, 2 ವಿದೇಶಿ ಕರೆನ್ಸಿ ಸಿಕ್ಕಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.