ETV Bharat / state

ಮೈಸೂರಿನಲ್ಲಿ ಹೆಚ್ಚಾದ ಸೋಂಕಿತರ ಪ್ರಕರಣ: ಸ್ಥಳೀಯರಲ್ಲಿ ಆತಂಕ

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದು ಸ್ಥಳೀಯ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

Corona case of mysore
ಮೈಸೂರಿನಲ್ಲಿ ಹೆಚ್ಚಾದ ಸೋಂಕಿತ ಪ್ರಕರಣ: ಸ್ಥಳೀಯರಲ್ಲಿ ಆತಂಕ
author img

By

Published : Apr 18, 2020, 5:54 PM IST

ಮೈಸೂರು: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದು ಸ್ಥಳೀಯ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ನ ಚಿತ್ರಣ ಹೇಗಿದೆ ಎಂಬ ವಿಶೇಷ ವರದಿ ಇಲ್ಲಿದೆ.

ಜಿಲ್ಲೆಯಲ್ಲಿ ಈವರೆಗೂ 76 (ಜನ) ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ನಂಜನಗೂಡಿನ ಜುಬಿಲಂಟ್ ಔಷಧಿ ಕಾರ್ಖಾನೆ, ತಬ್ಲಿಘಿ ಜಮಾಅತ್​ನ ಸಂಪರ್ಕ ಹೊಂದಿರುವವರು, ವಿದೇಶದಿಂದ ಬಂದವರು, ವಿದೇಶದಿಂದ ಬಂದವರ ಜೊತೆ ನಂಟು ಹೊಂದಿದ್ದವರು ಹಾಗೂ ಇಂದು ವೃದ್ಧನಲ್ಲಿ ಕಂಡುಬಂದ ಪ್ರಕರಣ ಸೇರಿದಂತೆ ಒಟ್ಟು 76 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಜುಬಿಲಂಟ್​​​ನಲ್ಲೇ ಅತಿ ಹೆಚ್ಚು ಸೋಂಕಿತರು: ನಂಜನಗೂಡಿನ ಬಳಿ ಇರುವ ಜುಬಿಲಂಟ್ ಜನರಿಕ್ ಫಾರ್ಮಾಸಿಟಿಕಲ್ ಕಂಪನಿಯ ನೌಕರರು ಹಾಗೂ ಅವರ ಕುಟುಂಬ ವರ್ಗದ 62 ಜನರಲ್ಲಿ ಇಲ್ಲಿಯವರೆಗೆ ಸೋಂಕು ಇರುವುದು ದೃಢಪಟ್ಟಿದ್ದು, ಉಳಿದ 8 ಮಂದಿ ತಬ್ಲಿಘಿ ಜಮಾಅತ್ ಸಂಪರ್ಕ ಹೊಂದಿದ್ದವರು. ಇನ್ನು 2 ಮಂದಿ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿದ್ದರೆ ಮತ್ತೊಂದು ದೇಶದಿಂದ ಮರಳಿದವರ ನಂಟು ಹೊಂದಿದವರಾಗಿದ್ದಾರೆ. ಕೊನೆಯದಾಗಿ ಒಬ್ಬ ವೃದ್ಧನ ಕುಟುಂಬದ ಮೂರು ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಅದರಲ್ಲಿ ರಾಜ್ಯದ ಹಲವು ಕಡೆ ಅದರಲ್ಲೂ ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಾದ ನಂಜನಗೂಡು, ತಿ.ನರಸೀಪುರ ಹೆಚ್.ಡಿ. ಕೋಟೆ ಹಾಗೂ ಮೈಸೂರು ನಗರದ ಸುಮಾರು 300 ಜನ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಜುಬಿಲಂಟ್ ಕಾರ್ಖಾನೆಯಿಂದ ಹೆಚ್ಚಾಗುತ್ತಿರುವುರಿಂದ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮೈಸೂರಿನಲ್ಲಿ ಹೆಚ್ಚಾದ ಸೋಂಕಿತರ ಪ್ರಕರಣ: ಸ್ಥಳೀಯರಲ್ಲಿ ಆತಂಕ

ಜಿಲ್ಲೆಯಲ್ಲಿ ಕೋವಿಡ್ - 19 ಚಿತ್ರಣ: ಜಿಲ್ಲಾಡಳಿತ ಕೋವಿಡ್-19 ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದು, 4486 ಜನರು ಹೋಮ್ ಕ್ವಾರಂಟೈನ್​ಗೆ ಒಳಪಟ್ಟಿದ್ದು , ಇವರನ್ನು ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ. ಅದರಲ್ಲಿ 2131 ಜನ ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು ಉಳಿದ 2,269 ಜನ ಈಗಲೂ ಹೋಮ್ ಕ್ವಾರಂಟೈನ್​​ನಲ್ಲಿದ್ದಾರೆ. ಇಲ್ಲಿಯವರೆಗೆ 1815 ಜನರ ಗಂಟಲು ದ್ರವ ಹಾಗೂ ರಕ್ತ ಮಾದರಿಯ ಪರೀಕ್ಷೆ ನಡೆಸಲಾಗಿದೆ.1742 ಜನರಿಗೆ ನೆಗೆಟಿವ್ ಬಂದಿದ್ದು, 76 ಜನರಿಗೆ ಪಾಸಿಟಿವ್ ಬಂದಿದೆ. 13 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 63 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂಜನಗೂಡಿಗೆ ಹರ್ಷಗುಪ್ತ ಭೇಟಿ: ಕೋವಿಡ್-19 ನಿಯಂತ್ರಣಕ್ಕಾಗಿ ವಿಶೇಷ ಅಧಿಕಾರಿಯಾಗಿ ಆಗಮಿಸಿರುವ ಹಿರಿಯ ಐ.ಎ.ಎಸ್ ಅಧಿಕಾರಿ ಹರ್ಷಗುಪ್ತ ನಿನ್ನೆ ಜುಬಿಲಂಟ್ ಕಾರ್ಖಾನೆಯ ಸಂಪರ್ಕದಿಂದ ಹೋಮ್ ಕ್ವಾರಂಟೈನ್​​ನಲ್ಲಿರುವ ನಂಜನಗೂಡಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮನೆಯಿಂದ ಹೊರಗೆ ನಿಂತು ಕ್ವಾರಂಟೈನ್​​ನಲ್ಲಿರುವ ವ್ಯಕ್ತಿಗಳ ಕುಟುಂಬದವರ ಆರೋಗ್ಯ ವಿಚಾರಿಸಿ ಅವರಿಗೆ ಯಾವ ರೀತಿ ಸೌಲಭ್ಯ ಒದಗಿಸಲಾಗಿದೆ ಎಂಬುದನ್ನು ಖುದ್ದಾಗಿ ವೀಕ್ಷಿಸಿ ಅವರಿಗೆ ಧೈರ್ಯ ಹೇಳಿದರು.‌

ಇಂದು ಉಸಿರಾಟ ಸಮಸ್ಯೆಯಿಂದ ಕೊರೊನಾ ಸೋಂಕಿತರಾಗಿರುವ ಸುಮಾರು 65 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿರದ ಈತನಿಗೆ ಹೇಗೆ ಕೊರೊನಾ ಸೋಂಕು ಬಂದಿದ್ದು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅವರ ಕುಟುಂಬದವರನ್ನು ಈಗಾಗಲೇ ಹೋಮ್ ಕ್ವಾರಂಟೈನ್​ನಲ್ಲಿ ಇಡಲಾಗಿದ್ದು, ಅವರ ಪರೀಕ್ಷೆ ಸಹ ನಡೆಸಲು ಸಿದ್ಧತೆ ನಡೆದಿದೆ. ಒಟ್ಟಾರೆ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಇದರಿಂದ ಜಿಲ್ಲೆಯನ್ನು ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದ್ದು, ಜನರಲ್ಲಿ ಭಯ, ಆತಂಕ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.