ಮೈಸೂರು: ಇಂದು ಮೈಸೂರು-ಬೆಳಗಾವಿ ನಡುವೆ ವಿಮಾನಯಾನ ಸಂಪರ್ಕ ಆರಂಭವಾಗಿದ್ದು , ಬಸ್ ಟಿಕೆಟ್ ಗಿಂತ ಕಡಿಮೆ ದರದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಉಡಾನ್-3 ಯೋಜನೆಯಡಿ ಇಂದು ಮೈಸೂರು ಬೆಳಗಾವಿ ನಡುವೆ ವಿಮಾನಯಾನ ಸಂಪರ್ಕ ಆರಂಭವಾಗಿದ್ದು, ಟ್ರೂ ಜೆಟ್ ವಿಮಾನಯಾನ ಸಂಸ್ಥೆಯು ಕಡಿಮೆ ದರದಲ್ಲಿ ಈ ಸೇವೆಯನ್ನು ಕಲ್ಪಿಸಿದೆ. ಎಟಿಆರ್ 72 ಆಸನಗಳ ವಿಮಾನವು ನಿತ್ಯ ಸಂಚರಿಸಲಿದೆ.
ಬಸ್ ಟಿಕೆಟ್ ದರಕ್ಕಿಂತ ಕಡಿಮೆ:
ಈ ವಿಮಾನದಲ್ಲಿ 1 ಗಂಟೆ 25 ನಿಮಿಷಗಳಲ್ಲಿ ಮೈಸೂರಿನಿಂದ ಬೆಳಗಾವಿ ತಲುಪಬಹುದು. ಪ್ರಯಾಣದ ಆರಂಭಿಕ ಮೂಲ ದರ 999 ರಿಂದ ಶುರುವಾಗಿದೆ. ಈ ಎರಡೂ ನಗರಗಳ ನಡುವಿನ ಬಸ್ ಪ್ರಯಾಣ ದರವು 1,130 ರೂ. ಇದೆ ಹಾಗೂ ಬಸ್ ನ ಪ್ರಯಾಣ ಅವಧಿ ಸುಮಾರು 12 ಗಂಟೆ ಯಾಗಿದೆ.ಇದರಿಂದ ಬಸ್ಗಿಂತ ಕಡೆಮೆ ದರ ಹಾಗೂ ಕಡಿಮೆ ಸಮಯದಲ್ಲಿ ಸಂಚಾರ ಮಾಡಬಹುದಾಗಿದೆ.
ಬೆಳಗಾವಿಯಿಂದ ನಿತ್ಯ ಬೆಳಿಗ್ಗೆ 9:35 ಕ್ಕೆ ಹೊರಡುವ ಈ ವಿಮಾನವು ಮೈಸೂರಿಗೆ ಬೆಳಿಗ್ಗೆ 11 ಕ್ಕೆ ಬರುವುದು. ಹಾಗೂ ಬೆಳಿಗ್ಗೆ 11:20 ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12:40 ಕ್ಕೆ ಬೆಳಗಾವಿ ತಲುಪಲಿದೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ಮಾಹಿತಿ ನೀಡಿದರು.