ETV Bharat / state

ರಂಗಾಯಣದ ಮೂಲಕ ಶಾಂತಿ ಕದಡಲು ಸರ್ಕಾರದ ಯತ್ನ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ - ಶಾಂತಿ ಕದಡುವ ಕೆಲಸ

ಕಾಂಗ್ರೆಸ್​ನಿಂದ ಪ್ರತಿಭಟನೆಗೆ ಸಜ್ಜು - ರಂಗಾಯಣದ ವಿರುದ್ಧ ಆಕ್ರೋಶ - ಅಡ್ಡಂಡ ಕಾರ್ಯಪ್ಪ ವರ್ತನೆಗೆ ಕಿಡಿ

ರಂಗಾಯಣದ ಮೂಲಕ ಶಾಂತಿ ಕದಡಲು ಬಿಜೆಪಿ ಸರ್ಕಾರ ಯತ್ನ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ
bjp-govt-trying-to-disrupt-peace-through-rangayana-kpcc-spokesperson-m-laxman-alleges
author img

By

Published : Jan 3, 2023, 3:29 PM IST

ಮೈಸೂರು: ರಂಗಾಯಣದ ಮೂಲಕ ಶಾಂತಿ ಕದಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನ ಮಾಡಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದರು.

ಇಂದು ಕಾಂಗ್ರೆಸ್ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಇತ್ತೀಚೆಗೆ ಮೈಸೂರು ರಂಗಾಯಣದಲ್ಲಿ ಪ್ರದರ್ಶನಗೊಂಡ ಸಾಂಬಾ ಶಿವ ಪ್ರಹಸನ ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವುದು ಖಂಡನೀಯ. ರಂಗಾಯಣದ ಮೂಲಕ ಬಿಜೆಪಿ ಸರ್ಕಾರ ಮೈಸೂರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ, ಎಂದು ಎಂ ಲಕ್ಷ್ಮಣ್ ಆರೋಪಿಸಿದರು.

ರಂಗಾಯಣದ ನಿರ್ದೇಶಕ ರೌಡಿ ತರ ವರ್ತಿಸುತ್ತಿದ್ದಾರೆ : ’’ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರೌಡಿ ರೀತಿ ವರ್ತನೆ ಮಾಡುತ್ತಿದ್ದು, ಅವರು ಟಿಪ್ಪು ನಿಜ ಕನಸುಗಳು ನಾಟಕದ ಮೂಲಕ ಶಾಂತಿ ಕದಡಲು ಯತ್ನಿಸಿದರು. ಈಗ ಸಾಂಬಾ ಶಿವ ಪ್ರಹಸನ ನಾಟಕದ ಮೂಲಕ ಕಾಂಗ್ರೆಸ್ ನಾಯಕರನ್ನು ಅವಹೇಳನ ಮಾಡಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಸಾಹಿತಿ ಎಸ್ ಎಲ್. ಬೈರಪ್ಪ ಹಾಗೂ ಮಾಸ್ಟರ್ ಮೈನ್ಡ್ ಪ್ರತಾಪ್ ಸಿಂಹ ಅವರನ್ನ ಮುಂದಿಟ್ಟುಕೊಂಡು ಶಾಂತಿ ಕದಡುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ, ಶೀಘ್ರವೇ ಮೈಸೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 10000 ಜನ ಸೇರಿಸಿ ಮುಂದಿನ ವಾರ ಬೃಹತ್ ಪ್ರತಿಭಟನೆಯನ್ನ ನಡೆಸಲಾಗುವುದು‘‘ ಎಂದು ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಮೀಸಲಾತಿ ಚುನಾವಣಾ ಗಿಮಿಕ್ಸ್ : ಪಂಚಮಸಾಲಿ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ನಿಗದಿ ಮಾಡಿರುವ ಸರ್ಕಾರದ ನಿರ್ಧಾರ ಚುನಾವಣಾ ಗಿಮಿಕ್ಸ್. ಈ ಎರಡು ಸಮುದಾಯಗಳಿಗೆ ನೀಡಿರುವ ಮಿಸಲಾತಿಯನ್ನ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಮಾಡಲಾಗಿದೆ. ಮೀಸಲಾತಿ ನೀಡುವ ಸರ್ಕಾರದ ನಿಲುವು ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲ ಮೀಸಲಾತಿ ಪ್ರಮಾಣ ಶೇಕಡಾ 50 ರಷ್ಟು ಮೀರಲು ಸಾಧ್ಯವಿಲ್ಲ. ಏನೇ ಆದರೂ ಕಾಂಗ್ರೆಸ್ ಪಕ್ಷವನ್ನ ದೂರುತ್ತಾರೆ ಎಂದು ಆರೋಪಿಸಿದರು.

ಅಮುಲ್​ನೊಂದಿಗೆ ಕೆ ಎಮ್ ಎಫ್ ವಿಲೀನಕ್ಕೆ ಹುನ್ನಾರ : ಅಮುಲ್ ಜೊತೆ ಕೆ ಎಂ ಎಫ್ ವಿಲೀನ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಅಮಿತ್ ಶಾ ನೇತೃತ್ವದಲ್ಲಿ ಅಸ್ಸೋಂನಲ್ಲಿ ನಡೆದ ಸಭೆಯಲ್ಲಿ ದೇಶದ ನಾಲ್ಕು ಪ್ರಮುಖ ಹಾಲು ಒಕ್ಕೂಟಗಳನ್ನ ವಿಲೀನ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ರಾಜ್ಯದ ಬಿಜೆಪಿ ನಾಯಕರು ವಿಲೀನ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ, ವಿಲೀನಕ್ಕೆ ಹುನ್ನಾರ ನಡೆದಿದೆ. ಕೆ ಎಂ ಎಫ್ ಅನ್ನು ಅದಾನಿ ಅಥವಾ ಅಂಬಾನಿ ಒಡೆತನಕ್ಕೆ ಕೊಡಲು ಹುನ್ನಾರ ನಡೆದಿದೆ. ಇದರ ಬಗ್ಗೆ ಪ್ರಶ್ನೆ ಮಾಡಲು ರಾಜ್ಯ ನಾಯಕರು ಧೈರ್ಯ ತೋರಬೇಕು, ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನ ಪ್ರಶ್ನೆ ಮಾಡುವ ಧೈರ್ಯವನ್ನು ರಾಜ್ಯ ಬಿಜೆಪಿ ನಾಯಕರು ತೋರಬೇಕು ಎಂದು ಕಾಂಗ್ರೆಸ್​​ ಮಾಧ್ಯಮ ವಕ್ತಾರ ಲಕ್ಷ್ಮಣ್​ ಒತ್ತಾಯಿಸಿದರು.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.