ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಗೋಡೆಗಳ ಮೇಲೆ 'RAPE' ಬರಹದಲ್ಲಿ ಕಲಾವಿದರು ಜಾಗೃತಿ ಮೂಡಿಸಿದ್ದಾರೆ.
ಮೈಸೂರಿನ ರವಿವರ್ಮ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್ ಮನೋಹರ ಹಾಗೂ ಸುಮಂತ್ ಗೌಡ ಅವರು ಈ ರೀತಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಪಾಳು ಗೋಡೆ ಮೇಲೆ ರೇಪ್ ಎಂಬುದಾಗಿ ಬರೆದು, ಆ ಅಕ್ಷರಗಳಿಗೆ ಆರೋಪಿಗಳನ್ನು ನೇಣು ಹಾಕಿರುವ ಚಿತ್ರ ಬಿಡಿಸಿದ್ದಾರೆ. ಆ ಚಿತ್ರದ ಮೂಲಕ ಮಹಿಳೆಯರ ರಕ್ಷಣೆ ಮಾಡಿ ಎಂದು ಸಂದೇಶ ಸಾರಿದ್ದಾರೆ.
ಕ್ರಿಯಾತ್ಮಕವಾಗಿ ಗೋಡೆ ಮೇಲೆ ಜಾಗೃತಿ ಮೂಡಿಸಿ, ರೇಪಿಸ್ಟ್‌ಗಳನ್ನು ಹ್ಯಾಂಗ್ ಮಾಡಿ, ಮಹಿಳೆಯರ ರಕ್ಷಣೆ ಮಾಡುವಂತೆ ಚಿತ್ರಕಲೆ ಮೂಲಕ ಸಂದೇಶ ನೀಡಿದ್ದಾರೆ.
ಓದಿ: ಚಿತ್ರದುರ್ಗ ಡಿಸಿ ಕಚೇರಿ ನಿರ್ಮಾಣ ನೆಪದಲ್ಲಿ ಖಾಸಗಿ ಕಂಪನಿಯಿಂದ ಲೂಟಿ ಆರೋಪ